wins ಆಕ್ಸ್​ಫರ್ಡ್ ಕಾಲೇಜು ತಂಡಕ್ಕೆ ಜಯ

wins ಆಕ್ಸ್​ಫರ್ಡ್ ಕಾಲೇಜು ಹಮ್ಮಿಕೊಂಡಿದ್ದ ‘ಆಕ್ಸ್​ಫರ್ಡ್ ಟ್ರೋಫಿ-2’ ಟಿ 20 ಕ್ರೀಕೆಟ್ ಪಂದ್ಯಾವಳಿಯಲ್ಲಿ ವಿಜೇತ ಆಕ್ಸ್​ಫರ್ಡ್ ಕಾಲೇಜು ತಂಡಕ್ಕೆ ಕಾಲೇಜಿನ ಚೇರ್ಮನ್ ವಸಂತ ಹೊರಟ್ಟಿ ಟ್ರೋಫಿ ವಿತರಿಸಿದರು.
wins ಆಕ್ಸ್​ಫರ್ಡ್ ಕಾಲೇಜು ಹಮ್ಮಿಕೊಂಡಿದ್ದ ‘ಆಕ್ಸ್​ಫರ್ಡ್ ಟ್ರೋಫಿ-2’ ಟಿ 20 ಕ್ರೀಕೆಟ್ ಪಂದ್ಯಾವಳಿಯಲ್ಲಿ ವಿಜೇತ ಆಕ್ಸ್​ಫರ್ಡ್ ಕಾಲೇಜು ತಂಡಕ್ಕೆ ಕಾಲೇಜಿನ ಚೇರ್ಮನ್ ವಸಂತ ಹೊರಟ್ಟಿ ಟ್ರೋಫಿ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವ ಕ್ರೀಡಾಪಟುಗಳಿಗೆ ಇನ್ನಷ್ಟು ಹೆಚ್ಚು ಪ್ರೋತ್ಸಾಹ
  • ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು
  • ಕ್ರೀಡೆಯಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ
ಹುಬ್ಬಳ್ಳಿ :
ಕೆಎಲ್​ಇ ಸಿಸಿ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿತು. ದೀಪಕ ಎನ್ ಅವರು ಮ್ಯಾನ್ ಆಫ್ ದಿ ಸೀರೀಸ್ ಹಾಗೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು. ಉತ್ತಮ ಬ್ಯಾಟ್ಸಮನ್ ಪ್ರಶಸ್ತಿಯನ್ನು ವೀರಾಜ ಹಾವೇರಿ, ಉತ್ತಮ ಬಾಲರ್ ಪ್ರಶಸ್ತಿಯನ್ನು ಅಭಿಷೇಕ ಎಸ್. ಹಾಗೂ ಉತ್ತಮ ವಿಕೇಟ್ ಕೀಪರ್ ಪ್ರಶಸ್ತಿಯನ್ನು ಅನಮೋಲ ಪಾಗದ ಅವರು ಪಡೆದುಕೊಂಡರು.
ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತ ಬಂಡು ಕುಲಕರ್ಣಿ ಮಾತನಾಡಿ, ಭವಿಷ್ಯದಲ್ಲಿ ಅಂತರ್ ಜಿಲ್ಲಾ ಪಂದ್ಯಾವಳಿಗಳನ್ನು ಏರ್ಪಡಿಸುವ ಮೂಲಕ ಯುವ ಕ್ರೀಡಾಪಟುಗಳಿಗೆ ಇನ್ನಷ್ಟು ಹೆಚ್ಚು ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಕ್ಸ್​ಫರ್ಡ್ ಸಮೂಹ ಸಂಸ್ಥೆಗಳ ಚೇರ್ಮನ್ ವಸಂತ ಹೊರಟ್ಟಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ವಿವಿಧ ಕ್ರೀಡೆಗಳಲ್ಲಿ ಆಕ್ಸ್​ಫರ್ಡ್ ಕಾಲೇಜಿನ 60ಕ್ಕೂ ಹೆಚ್ಚು ಯುನಿವರ್ಸಿಟಿ ಬ್ಲೂ ಇದ್ದಾರೆ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಮತ್ತಷ್ಟು ಸುಧಾರಿಸುತ್ತದೆ ಎಂದರು.
ಒಟ್ಟು ನಾಲ್ಕು ದಿನಗಳ ಪಂದ್ಯ ಆಯೋಜಿಸಲಾಗಿತ್ತು. ವಿವಿಧ ಕಾಲೇಜುಗಳ ತಂಡಗಳು ಭಾಗವಹಿಸಿ, ಅತ್ಯುತ್ತಮ ಆಟ ಪ್ರದರ್ಶಿಸಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net