ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ನಮ್ಮ ಗುರಿ

ವಿನಯ್ ಕುಲಕರ್ಣಿ
ವಿನಯ್ ಕುಲಕರ್ಣಿ
Published on
ಕಿತ್ತೂರು: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕ ಪಾಲಿಕೆ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.
ಕಿತ್ತೂರಿನ ಡೊಂಬರಕೊಪ್ಪ ಐಬಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಕುರಿತು ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಲಾಗಿದೆ. ರಾಜ್ಯಪಾಲರ ಬಳಿ ಪ್ರಸ್ತಾವನೆ ಇದೆ. ಆದರೆ, ಈ ಪ್ರಕ್ರಿಯೆಗೆ ಯಾರು ತಡೆಯೊಡ್ಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
* ಕಾಂಗ್ರೆಸ್​ಗೆ ಗೆಲುವು ಖಚಿತ: ಉಪ ಚುನಾವಣೆಯ ಎರಡೂ ೆತ್ರಗಳಲ್ಲಿ ಕಾಂಗ್ರೆಸ್​ ಅಭ್ಯಥಿರ್ಗಳು ಗೆಲುವು ಸಾಧಿಸಲಿದ್ದಾರೆ. ನಾನೂ ಸ್ಟಾರ್​ ಕ್ಯಾಂಪೇನರ್​ ಆಗಿದ್ದು, ಏ. 1ರಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ ಎಂದರು.
* ಪಕ್ಷದ ನಿರ್ಧಾರ ಸರಿ: ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಕಾಂಗ್ರೆಸ್​ನಲ್ಲಿ ಟಿಕೆಟ್​ ವಿಚಾರವಾಗಿ ಸಣ್ಣಪುಟ್ಟ ಅಸಮಾಧಾನಗಳಿರಬಹುದು. ಆದರೆ, ಪ್ರಸ್ತುತ ಮೋಹನ ಲಿಂಬಿಕಾಯಿ ಅವರು ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಹಾಗಾಗಿ ಹೈಕಮಾಂಡ್​ ಅವರಿಗೆ ಟಿಕೆಟ್​ ನೀಡಿರುವುದು ಸರಿಯಾದ ನಿರ್ಧಾರವಾಗಿದೆ ಎಂದರು.
* ಸಚಿವ ಸಂಪುಟ ಸೇರ್ಪಡೆ ಆಕಾಂಕ್ಷೆ: ಮುಂದಿನ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾದರೆ ನನಗೂ ಅವಕಾಶ ನೀಡಬಹುದು ಎಂಬ ಆಶಯವಿದೆ. ಹೈಕಮಾಂಡ್​ ಮನಸ್ಸು ಮಾಡಿದರೆ ನಾನು ಸಚಿವನಾಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ಈ ಕುರಿತು ಹೈಕಮಾಂಡ್​ ನಿರ್ಧಾರಕ್ಕೆ ಬದ್ಧ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net