Orchids School ಉತ್ತರ ಕರ್ನಾಟಕದಲ್ಲಿ ಆರ್ಕಿಡ್ಸ್ ಶಾಲೆ ಅತ್ಯುತ್ತಮ

ಹುಬ್ಬಳ್ಳಿಯ ಗೋಕುಲ ರಸ್ತೆ ಬಳಿಯ ವಿಮಾನ ನಿಲ್ದಾಣ ಎದುರಿನ Orchids School ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ ಅನ್ನು ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಉದ್ಘಾಟಿಸಿದರು.
ಹುಬ್ಬಳ್ಳಿಯ ಗೋಕುಲ ರಸ್ತೆ ಬಳಿಯ ವಿಮಾನ ನಿಲ್ದಾಣ ಎದುರಿನ Orchids School ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ ಅನ್ನು ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಉದ್ಘಾಟಿಸಿದರು.
Published on
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್ Orchids School ಆರಂಭವಾಗಿರುವುದು ಉತ್ತಮ ಬೆಳವಣಿಗೆ. ಇಲ್ಲಿಯ ಶಿಕ್ಷಕರು ತರಗತಿ ಆರಂಭಕ್ಕೆ ಮುನ್ನ ಸಂಸ್ಕಾರ ಮತ್ತು ಮಾನವೀಯ ಮೌಲ್ಯ ಬೋಧನೆ ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ಇಲ್ಲಿಯ ಗೋಕುಲ ರಸ್ತೆ ಬಳಿಯ ವಿಮಾನ ನಿಲ್ದಾಣ ಎದುರಿನಲ್ಲಿ ಆರಂಭಿಸಿರುವ ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಶಾಲೆ ನೋಡಿ ಖುಷಿಯಾಗಿದೆ. ಉತ್ತಮ ರೀತಿಯ ಕಟ್ಟಡ, ವಿಶಾಲ ಜಾಗವಿದೆ. ನಿಸರ್ಗದ ಮಡಿಲಲ್ಲಿ ಈ ಶಾಲೆ ಇರುವುದು ಒಳ್ಳೆಯ ಬೆಳವಣಿಗೆ. ಇಂಥ ವಾತಾವರಣದಲ್ಲಿ ಮಕ್ಕಳು ಅತ್ಯುತ್ತಮ ಸಂಸ್ಕಾರವಂತಾರುತ್ತಾರೆ ಎಂಬ ನಂಬಿಕೆ ಇದೆ. ಬಹಳಷ್ಟು ಜನರು ವಾಣಿಜ್ಯ ಉದ್ದೇಶಕ್ಕೆ ಶಾಲೆಗಳನ್ನು ಆರಂಭಿಸುತ್ತಾರೆ. ಆದರೆ ಈ ಶಾಲೆ ಆರಂಭಿಸಿದವರಿಗೆ ಹಣದ ವ್ಯಾಮೋಹ ಇಲ್ಲ ಎಂದರು.
ರಾಷ್ಟ್ರ ಮತ್ತು ಅತ್ಯುತ್ತಮ ಸಮಾಜ ನಿರ್ಮಾಣ ಮಾಡುವ ಹೊಣೆ ಶಿಕ್ಷಕರ ಕೈಯಲ್ಲಿದೆ. ಬಹಳಷ್ಟು ಶಿಕ್ಷಕರು, ತಮ್ಮ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ತ್ಯಾಗ ಮಾಡಿದ್ದಾರೆ. ಇಲ್ಲಿಯ ಶಿಕ್ಷಕರು ಕೂಡ ಇಂಥ ಜವಾಬ್ದಾರಿ ಹೊತ್ತುಕೊಂಡು ಪಾಠ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಅರುಣ ಚರಂತಿಮಠ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಇಂಥ ಶಾಲೆ ಇರಲಿಲ್ಲ. ಈಗ ಆರಂಭಿಸಲಾಗಿದೆ. ಬೆಂಗಳೂರು-ಮುಂಬೈ ಮಧ್ಯೆ ಶಾಲೆ ಆರಂಭಿಸುವ ಉದ್ದೇಶ ಈಗ ಈಡೇರಿದೆ. ಈ ಶಾಲೆ ಮಕ್ಕಳಿಗೆ ಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆಗಳ ಕುರಿತು ಪಾಠ ಮಾಡಲಾಗುತ್ತದೆ ಎಂದರು.
ಪ್ರಾದೇಶಿಕ ಮುಖ್ಯ ಆಡಳಿತಾಧಿಕಾರಿ ಸೆಬಿನ್ ಸೆಬಾಸ್ಟಿಯನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಕೀಲ ಟ್ರಸ್ಟಿ ಭೈರವ ಚರಂತಿಮಠ, ಮಿಡ್ ಮ್ಯಾಕ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಇಸ್ಮಾಯಿಲ್ ಸಂಶಿ, ತಬ್ರೇಜ್ ಸಂಶಿ, ಪ್ರಾಚಾರ್ಯೆ ಅಶ್ವಿನಿ ಇತರರಿದ್ದರು. ಕಾರ್ಯಕ್ರಮ ನಂತರ ಪಾಲಕರ ಓರಿಯಂಟೇಷನ್ ಕಾರ್ಯಕ್ರಮ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net