ಸುಮಾರು 500ಕ್ಕೂ ಹೆಚ್ಚು ಜನ ಟ್ರ್ಯಾಕ್ಟರ್ನಲ್ಲಿ ಸಸಿಗಳು ಹಾಗೂ ನೀರಿನ ಟ್ಯಾಂಕರ್ಗಳೊಂದಿಗೆ ಘಟಕದ ಒಳಗೆ ಹೋಗಲು ಯತ್ನಿಸಿದರು. ಆದರೆ, ಘಟಕದ ಎದುರು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ವತಃ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಸ್ಥಳದಲ್ಲಿದ್ದು, ಎಲ್ಲರನ್ನೂ ಒಳಗೆ ಬಿಡುವುದಿಲ್ಲ. ಸಸಿ ನೆಡಲು 15 ಜನರಿಗೆ ಮಾತ್ರ ಅವಕಾಶ ಕೊಡುತ್ತೇವೆ ಎಂದರು. ಬಯೋಗ್ಯಾಸ್ ನಿರ್ಮಾಣಕ್ಕೆ ವಿರೋಧವಾದಾಗಿನಿಂದ ಯಾವುದೇ ಕಾಮಗಾರಿ ನಡೆಸಿಲ್ಲ ಎಂದು ಘಾಳಿ ಮನವರಿಕೆ ಮಾಡಿದರು. ಇದನ್ನು ಒಪ್ಪದ ಜನ ಎಲ್ಲರೂ ಘಟಕದ ಒಳಗೆ ಸಸಿ ನೆಡುತ್ತೇವೆ ಎಂದು ಪಟ್ಟು ಹಿಡಿದರು. ಪೊಲೀಸರು ಇದಕ್ಕೆ ಅವಕಾಶ ನೀಡದಿದ್ದಾಗ ಸುಮಾರು 15 ಜನರಿಗೆ ಮಾತ್ರ ಸಸಿ ನೆಡಲು ಅವಕಾಶ ಮಾಡಿಕೊಟ್ಟರು.