ಓಪನ್ ರ‍್ಯಾಪಿಡ್ ಚೆಸ್ ಪಂದ್ಯಾವಳಿ 24ರಂದು

ನಿತಿನ್ ಟಗರಪುರ
ನಿತಿನ್ ಟಗರಪುರ
Published on
ಧಾರವಾಡ: ನಗರದ ಕಾಸ್ಮಸ್ ಕ್ಲಬ್ ಮತ್ತು ಅಭಿಜಿತ್ ಬೆಂಗೇರಿ -ಫೌಂಡೇಶನ್ ಜಂಟಿಯಾಗಿ ಮೇ 24ರಂದು ಕಾಸ್ಮಸ್ ಕ್ಲಬ್‌ನಲ್ಲಿ ಓಪನ್ ರ‍್ಯಾಪಿಡ್ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕಾಸ್ಮಸ್ ಕ್ಲಬ್ ಅಧ್ಯಕ್ಷ ನಿತಿನ್ ಟಗರಪುರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ಲಿ ಚೆಸ್ ಆಟವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಟೂರ್ನಾಮೆಂಟ್ ಆಯೋಜಿಸಲಾಗಿದೆ. 9, 12, 15 ವರ್ಷದ ವಯೋಮಿತಿ ಹಾಗೂ ಎಲ್ಲ ವಯೋಮಾನದವರಿಗೆ ಮುಕ್ತ ಪಂದ್ಯಾವಳಿ ಸೇರಿ ನಾಲ್ಕು ವಿಭಾಗದಲ್ಲಿ ಪಂದ್ಯಾವಳಿ ಜರುಗಲಿದೆ ಎಂದು ತಿಳಿಸಿದರು.
ಬೆಳಗ್ಗೆ 9.30ರಿಂದ ಸಂಜೆ 4.30 ವರೆಗೆ ಪಂದ್ಯಾವಳಿ ಜರುಗಲಿದ್ದು, ವಿಜೇತರಿಗೆ ನಗದು ಬಹುಮಾನ ಮತ್ತು ಟ್ರೋಫಿ ಮತ್ತು ಪದಕಗಳನ್ನು ನೀಡಲಾಗುವುದು. ಪಂದ್ಯಾವಳಿಗೆ ರಾಜ್ಯ ಚೆಸ್ ಅಸೋಸಿಯೇಷನ್ ಮತ್ತು ಜಿಲ್ಲಾ ಚೆಸ್ ಅಸೋಸಿಯೇಷನ್ ಮಾನ್ಯತೆ ಇದ್ದು, ಅಸೋಸಿಯೇಷನ್ ಪ್ರಕಾರ ಎಲ್ಲ ನಿಯಮಗಳು ಮತ್ತು ರ‍್ಯಾಂಕಿಂಗ್‌ಗಳು ಇರಲಿವೆ ಎಂದರು.
ಬೆಂಗೇರಿ ಫೌಂಡೇಶನ್ ಅಧ್ಯಕ್ಷ ಅಭಿಜಿತ್ ಬೆಂಗೇರಿ ಮಾತನಾಡಿ, ಪಂದ್ಯಾವಳಿಯಲ್ಲಿ ಭಾಗವಹಿಸುವುದಕ್ಕೆ 150 ಆಟಗಾರರು ಆಗಮಿಸುತ್ತಿದ್ದಾರೆ. ಮೇ 24ರಂದೂ ಸ್ಥಳಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾಸ್ಮಸ್ ಕ್ಲಬ್ ಉಪಾಧ್ಯಕ್ಷ ಎಚ್.ಎ ಹೆಬ್ಬಾಳ, ಕಾರ್ಯದರ್ಶಿ ಅಶೋಕ ಹಿರೇಮಠ, ಅಭಿಜಿತ್ ಬೆಂಗೇರಿ, ವಿಮರ್ಶಾ ಹೊಸಪೇಟಿ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net