ಕೆಎಲ್ಇ ಆಸ್ಪತ್ರೆಯಲ್ಲಿ ಕ್ಯಾನ್ಸರ್ (Cancer) ಚಿಕಿತ್ಸೆಗೆ ಒಪಿಡಿ
ಹುಬ್ಬಳ್ಳಿಯ ಕೆಎಲ್ಇ ಆಸ್ಪತ್ರೆ ಮತ್ತು ಎಂಆರ್ಸಿಯಲ್ಲಿ ಕ್ಯಾನ್ಸರ್ (Cancer) ಚಿಕಿತ್ಸೆ ಒಪಿಡಿ ವಿಭಾಗವನ್ನು ಸರ್ಜಿಕಲ್ ಆಂಕೊಲಾಜಿಯ ಎಚ್ಒಡಿ ಡಾ. ರಾಜೇಂದ್ರ ಮೆಟಗುಡಮಠ ಉದ್ಘಾಟಿಸಿದರು. ಡಾ. ರಾಘವೇಂದ್ರ ಸಾಗರ, ಡಾ. ಎಂ.ಜಿ. ಹಿರೇಮಠ, ನವೀನ ಎನ್. ಹಾಗೂ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರತಿ ಗುರುವಾರ ಕ್ಯಾನ್ಸರ್ (Cancer) ತಪಾಸಣೆ ಮತ್ತು ಸಮಾಲೋಚನೆ.
ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ.
ವಿಶ್ವದರ್ಜೆಯ ಉಪಕರಣಗಳು
ಆಂಕೊಲಾಜಿ ತಜ್ಞರು ಪ್ರತಿ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕ್ಯಾನ್ಸರ್ ತಪಾಸಣೆ ಮತ್ತು ಸಮಾಲೋಚನೆ ನಡೆಸುವರು.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆ ನಿರ್ದೇಶಕ ಡಾ. ಎಂ. ಜಿ. ಹಿರೇಮಠ, ಹುಬ್ಬಳ್ಳಿಯಲ್ಲಿ ಆಂಕೊಲಾಜಿ ಒಪಿಡಿ ಆರಂಭಗೊಂಡಿರುವುದರಿಂದ ಈ ಪ್ರದೇಶದ ಅಗತ್ಯವಿರುವ ರೋಗಿಗಳು ವಿಶ್ವದರ್ಜೆಯ ಉಪಕರಣಗಳು ಮತ್ತು ರೋಬೋಟಿಕ್ ಆಪರೇಷನ್ಗಳಂತಹ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಬಹುದು ಎಂದರು.
ಅನುಭವಿ ಸೂಪರ್ ಸ್ಪೆಷಾಲಿಟಿ ಶಸ್ತ್ರಚಿಕಿತ್ಸಕರೊಂದಿಗೆ ಒಂದೇ ಸೂರಿನಡಿ ಸುಧಾರಿತ ಕ್ಯಾನ್ಸರ್ ಚಿಕಿತ್ಸೆಗಳನ್ನು ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದರು.
ಬೆಳಗಾವಿಯ ಕೆಎಲ್ಇ ಡಾ. ಸಂಪತ ಕುಮಾರ್ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಎಲ್ಲ ತರಹದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆಗಳು ಲಭ್ಯವಿದ್ದು, ಕ್ಯಾನ್ಸರ್ ಪೀಡಿತರು ಇದರ ಪ್ರಯೋಜನ ಪಡೆದುಳ್ಳಬಹುದು ಎಂದು ತಿಳಿಸಿದರು.
ವಿಕಿರಣ ಆಂಕೊಲಾಜಿಯ ಡಾ. ರಾಘವೇಂದ್ರ ಸಾಗರ, ಸರ್ಜಿಕಲ್ ಆಂಕೊಲಾಜಿಯ ಎಚ್ಒಡಿ ಡಾ. ರಾಜೇಂದ್ರ ಮೆಟಗುಡಮಠ, ಸಿಒಒ ನವೀನ ಎನ್. ಅವರು ಮಾತನಾಡಿದರು.
ಪ್ರಾಂಶುಪಾಲರಾದ ಡಾ. ಶಾರದಾ ಮೆಟಗುಡ, ಆಡಳಿತಾಧಿಕಾರಿ ಕರ್ನಲ್ ಡಾ. ಅರುಣ ಕುಮಾರ ಮಲ್ಲಜೋಸ್ಯುಲಾ, ವೈದ್ಯಕೀಯ ಅಧೀಕ್ಷಕ ಡಾ. ಸಮೀರ ದೇಸಾಯಿ ಹಾಗೂ ಇತರರು ಇದ್ದರು.