onlinegame ಲಾಭದಾಸೆಗೆ 98.20 ಲಕ್ಷ ರೂ. ಗಯಾಬ್

onlinegame fraud
onlinegame fraud
Published on
ಹುಬ್ಬಳ್ಳಿ: ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ಧಾರವಾಡ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 98.20 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಕಾರ್ತಿಕ ಸಾಲಿ ವಂಚನೆಗೆ ಒಳಗಾದವರು. ಮನೆಯಲ್ಲಿ ಕುಳಿತು ಫೇಸ್‌ಬುಕ್ ನೋಡುತ್ತಿದ್ದ ವೇಳೆ ಅಪರಿಚಿತರು ಗೇಮ್‌ವೊಂದರ ಲಿಂಕ್ ಕಳುಹಿಸಿದ್ದಾರೆ. ಲಿಂಕ್ ಓಪನ್ ಮಾಡಿ ಗೇಮ್ ಆಡುವಾಗ ಹೆಚ್ಚು ಅಂಕ ನೀಡಿ ಹಣ ನೀಡಿದ್ದಾರೆ.
ಬಳಿಕ ಹೆಚ್ಚಿನ ಹಣ ಹೂಡಿಕೆ ಮಾಡಿಕೊಂಡು ಹಣ ನೀಡದೆ ವಂಚಿಸಿದ್ದಾರೆ ಎಂದು ಕಾರ್ತಿಕ್, ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net