ಕರ್ತವ್ಯನಿರತ ಸೈನಿಕ ಹೃದಯಾಘಾತದಿಂದ ನಿಧನ

ವಸಂತರೆಡ್ಡಿ
ವಸಂತರೆಡ್ಡಿ
Published on
ಧಾರವಾಡ: ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ರಾಜಸ್ತಾನದ ಬಾಡಮೇರ್​ದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಗರಗ ಗ್ರಾಮದ ವಸಂತರೆಡ್ಡಿ ಕೆಂಡರೆಡ್ಡಿ (45) ಮೃತ ಯೋಧ. ಅವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಸಹೋದರ ಇದ್ದಾರೆ. ವಸಂತರೆಡ್ಡಿ ಅವರ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿ ಗರಗ ಗ್ರಾಮದಲ್ಲಿ ನೆಲೆಸಿದ್ದಾರೆ.
18ನೇ ಮೆಕಟ್ಯಾಜ್​ ಇನ್​ಫಂಟ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವಸಂತರೆಡ್ಡಿ ಅವರು ಸದ್ಯ ರಾಜಸ್ತಾನದ ಬಾಡಮೇರ್​ದಲ್ಲಿ ಪತ್ನಿ, ಇಬ್ಬರು ಪುತ್ರಿಯರೊಂದಿಗೆ ಇದ್ದರು. 24 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತರೆಡ್ಡಿ ಬುಧವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು 4 ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಬರಲು ತಯಾರಿ ನಡೆಸಿದ್ದರು.
ಅವರ ಪಾರ್ಥೀವ ಶರೀರವನ್ನು ಗೋವಾವರೆಗೆ ವಿಮಾನದಲ್ಲಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ತರಲಾಗುತ್ತದೆ. ಯೋಧನ ಅಂತ್ಯಕ್ರಿಯೆ ಭಾರತೀಯ ಸೇನೆಯ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹೃದಯಾಘಾತದಿಂದ ಮೃತಪಟ್ಟ ಯೋಧನ ಗರಗ ಗ್ರಾಮದ ಮನೆಗೆ ಮಾಜಿ ಶಾಸಕ ಅಮೃತ ದೇಸಾಯಿ, ಇತರರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net