ಸೆಂಟ್ರಲ್ ಕ್ಷೇತ್ರದಲ್ಲಿ ಎಸ್​ಐಆರ್ ಪ್ರಕ್ರಿಯೆಯಲ್ಲಿ ಲೋಪ SIR

SIR ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ
SIR ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ
Published on

ಪ್ರಮುಖ ಮುಖ್ಯಾಂಶಗಳು

  • ಸಮಗ್ರ ತನಿಖೆಗೆ ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಪತ್ರ
  • ಬಿಎಲ್​ಇಗಳಿಂದ ಸಹಿ ಮಾಡಿಸಲು ಒತ್ತಾಯಿಸುತ್ತಿದ್ದಾರೆ
  • ಮನೆಗೆ ಭೇಟಿ ನೀಡಿ ಎಸ್​ಐಆರ್ ಪ್ರಕ್ರಿಯೆ ನಡೆಸದಂತಹ ಘಟನೆಗಳು ಹೆಚ್ಚಿವೆ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಶಾಸಕ ಮಹೇಶ ಟೆಂಗಿನಕಾಯಿ, ಈ ಕುರಿತು ಈಗಾಗಲೇ ರಾಜ್ಯ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ ಎಂದರು.
ಶಹರ ಪ್ರದೇಶದ ಬಿಜೆಪಿ ಶಾಸಕರಿರುವ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವುದು, ಪ್ರತಿ ಮನೆಗೆ ಭೇಟಿ ನೀಡಿ ಎಸ್​ಐಆರ್ ಪ್ರಕ್ರಿಯೆ ನಡೆಸದಂತಹ ಘಟನೆಗಳು ಹೆಚ್ಚಿವೆ ಎಂದು ದೂರಿದರು.
ಬಿಎಲ್​ಒಗಳು ಮತದಾರರ ಮನೆಗೆ ಭೇಟಿ ನೀಡದೇ, ಮತದಾರರು ಸ್ಥಳಾಂತರಗೊಂಡಿದ್ದಾರೆ ಎಂದು ತಪು್ಪ ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ.
ಮತದಾರರು ಸ್ಥಳಾಂತರಗೊಂಡ ಖಾಲಿ (ಬ್ಲಾಂಕ್) ಅರ್ಜಿ ನಮೂನೆಗಳಿಗೆ ಬಿಎಲ್​ಇಗಳಿಂದ ಸಹಿ ಮಾಡಿಸಲು ಒತ್ತಾಯಿಸುತ್ತಿದ್ದಾರೆ ಎಂದರು.
ಹು-ಧಾ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕ ಹಾಗೂ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಆ. 2ರಂದು 72 ಸಾವಿರಕ್ಕೂ ಅಧಿಕ ಅರ್ಹ ಮತದಾರರ ಹೆಸರುಗಳನ್ನು ಸ್ಥಳಾಂತರ ಎಂದು ದಾಖಲಿಸಿರುವ ಮಾಹಿತಿ ದೊರೆತಿದೆ. ನಂತರ ಕೇವಲ ಒಂದು ದಿನದಲ್ಲಿ ಮಾಹಿತಿ ಸಂಗ್ರಹವಾಗದ ಕಾಲಂನಿಂದ ಸ್ಥಳಾಂತರ ಕಾಲಂ ಪಟ್ಟಿಗೆ ಸೇರಿಸಲಾಗಿದೆ.
ಅಂದರೆ, ಈ ಮತದಾರರು ಕಾಯಂ ಆಗಿ ಮತದಾರರ ಪಟ್ಟಿಯಿಂದ ರದ್ದುಗೊಂಡಂತೆ ಎಂದು ತಿಳಿಸಿದರು.
ಬಿಎಲ್​ಎ-2ಗಳ ಅಭಿಪ್ರಾಯ, ಸಮ್ಮತಿ ಅಥವಾ ಸಹಿ ಪಡೆಯದೇ ಸಾವಿರಾರು ಮತದಾರರನ್ನು ಏಕಪಕ್ಷೀಯವಾಗಿ ಕಾಯಂ ಸ್ಥಳಾಂತರ ಎಂದು ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಇನ್ಯುಮರೇಶನ್ ಫಾಮ್ರ್ (ಇಎಫ್) ವಿತರಣೆ ಕೊನೆಯ ದಿನಗಳವರೆಗೆ ಶೇ. 85ರಷ್ಟಾಗಿದ್ದರೂ, ಒಂದೇ ರಾತ್ರಿಯಲ್ಲಿ ಅದನ್ನು ಶೇ. 100ರಷ್ಟು ವಿತರಣೆಯೆಂದು ದಾಖಲಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಹೇಳಿದರು.
ಆ. 1ರವರೆಗೆ 20 ಸಾವಿರಕ್ಕೂ ಹೆಚ್ಚು ಇದ್ದ ಸಂಗ್ರಹಗೊಳ್ಳದ ಇಎಫ್ ಅರ್ಜಿಗಳನ್ನು ಒಂದೇ ರಾತ್ರಿಯಲ್ಲಿ ಕಾಯಂ ಸ್ಥಳಾಂತರ ಪಟ್ಟಿಗೆ ಸೇರಿಸಿರುವುದು ಹೆಚ್ಚು ಅನುಮಾನಕ್ಕೆ ವ್ಯಕ್ತವಾಗಿದೆ. ಇಎಫ್ ಅರ್ಜಿಗಳನ್ನು ಮರಳಿಸದ ಮತದಾರರಿಗೆ ಪಂಚಯಾದಸ್ತ ಅರ್ಜಿಗಳನ್ನು ನೀಡಿ, ಅವರ ಸಹಿರಿ ಪಡೆಯಬೇಕಾಗಿದ್ದರೂ, ನಿಯಮ ಅನುಸರಿಸಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಶಾಂತ ಜಾಧವ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net