ಗೋಮಾಂಸ ಅಕ್ರಮ ಸಾಗಣೆಗೆ ತಡೆ

ಬೆಳಗಾವಿಯಿಂದ ಬೆಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿಗಳು ಮತ್ತು ಜಪ್ತಿ ಮಾಡಿದ ವಾಹನ.
ಬೆಳಗಾವಿಯಿಂದ ಬೆಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಆರೋಪಿಗಳು ಮತ್ತು ಜಪ್ತಿ ಮಾಡಿದ ವಾಹನ.
Published on
ಧಾರವಾಡ: ಸುಮಾರು 60ಕ್ಕೂ ಹೆಚ್ಚು ಗೋವುಗಳ ಅಮಾನವೀಯವಾಗಿ ಹತ್ಯೆ ಮಾಡಿ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ವಿಶ್ವ ಹಿಂದು ಪರಿಷತ್​ ಹಾಗೂ ಬಜರಂಗ ದಳದ ಕಾರ್ಯಕರ್ತರು ತಡೆದು ಉಪನಗರ ಠಾಣೆಗೆ ಒಪ್ಪಿಸಿದ್ದಾರೆ.
ಬೆಳಗಾವಿಯ ಆಟೋನಗರದಿಂದ ಬೆಂಗಳೂರಿನ ನೀಲಸಂದ್ರಕ್ಕೆ ಗೋಮಾಂಸ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ- 4ರ ಕೆಲಗೇರಿ ಸಮೀಪ ವಾಹನ ತಡೆದಿದ್ದಾರೆ. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ವಿಶ್ವ ಹಿಂದು ಪರಿಷತ್​ ಹಾಗೂ ಬಜರಂಗ ದಳದ ಕಾರ್ಯಕರ್ತರಾದ ಸಿದ್ದು ಹಿರೇಮಠ, ಧ್ರುವ ಉಪ್ಪಾರ, ದರ್ಶನ ಹಾಗೂ ಇತರರು ವಾಹನವನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ನೆರವಾಗಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net