`ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 22ರಿಂದ

ಪ್ರಭು ಹಂಚಿನಾಳ
ಪ್ರಭು ಹಂಚಿನಾಳ
Published on
ಧಾರವಾಡ: ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಆಗಸ್ಟ್ 22 ಮತ್ತು 23ರಂದು `ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2026' ಆಯೋಜಿಸಲಾಗಿದೆ ಎಂದು ಮಂಡಳಿಯ ನೂತನ ಉಪಾಧ್ಯಕ್ಷ ಪ್ರಭು ಹಂಚಿನಾಳ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಉತ್ಸವದಲ್ಲಿ ಚಲನಚಿತ್ರ, ಸಾಕ್ಷ್ಯಚಿತ್ರ ಕಿರುಚಿತ್ರ ಹಾಗೂ ವೀಡಿಯೋ ಆಲ್ಬಂ ಸಾಂಗ್ ವಿಭಾಗಗಳ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯಲಿವೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದರು.
2025-26ರಲ್ಲಿ ನಿರ್ಮಾಣಗೊಂಡು ಬಿಡುಗಡೆಯಾದ ಅಥವಾ ಪ್ರದರ್ಶನಕ್ಕೆ ಸಿದ್ಧವಾಗಿರುವ ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ಹಾಗೂ ವೀಡಿಯೋ ಆಲ್ಬಂ ಸಾಂಗ್‌ಗಳನ್ನು ಉತ್ಸವದಲ್ಲಿ ಭಾಗವಹಿಸಲು ಆಗಸ್ಟ್ 5ರೊಳಗೆ ಸಲ್ಲಿಸಬಹುದು. ಚಲನಚಿತ್ರ ಸೃಜನಶೀಲರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
2023-24ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಧಾರವಾಡದಲ್ಲಿ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಚಿತ್ರರಂಗ ಹಾಗೂ ಸಾರ್ವಜನಿಕರ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ, ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಉತ್ಸಾಹದಲ್ಲಿ ಈ ಬಾರಿಯೂ ಆಯೋಜಿಸುತ್ತಿದ್ದೇವೆ ಎಂದು ವಿವರಿಸಿದರು.
ಅದೇ ಸಂದರ್ಭದಲ್ಲಿ ಮಂಡಳಿಗೆ 2026-30 ಅವಧಿಗೆ ಆಡಳಿತ ಮಂಡಳಿ ಸದಸ್ಯರಾಗಿ ನೂತನವಾಗಿ ಅವಿರೋಧ ಆಯ್ಕೆಯಾದ ಮಂಜುನಾಥ ಹಗೇದಾರ, ಡಾ. ಕಲ್ಮೇಶ ಹಾವೇರಿಪೇಟ, ರಾಹುಲ್ ದತ್ತ ಪ್ರಸಾದ, ಅಷ್ಪಾಕ್ ಸಯ್ಯದ, ಪ್ರವೀಣಾ ಕುಲಕರ್ಣಿ, ಕಲ್ಲನಗೌಡ ಸಿದ್ದಾಪೂರ, ನಜೀರ್‌ಸಾಬ ದೇಸಾಯಿ, ರುದ್ರೇಶ್ ಹಳವದ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಮಂಜುನಾಥ ಹಗೇದಾರ, ಡಾ. ಕಲ್ಮೇಶ ಹಾವೇರಿಪೇಟ, ರಾಹುಲ್ ದತ್ತ ಪ್ರಸಾದ, ಕಲ್ಲನಗೌಡ ಸಿದ್ದಾಪೂರ, ಎಂ.ಎಂ. ಮುಮ್ಮಿಗಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net