no tet ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ರದ್ದುಗೊಳಿಸಬೇಕೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು. ಬಸವರಾಜ ಗುರಿಕಾರ, ರಾಜಶೇಖರ ಹೊನ್ನಪ್ಪನವರ, ಅಜಿತ ದೇಸಾಯಿ, ಶಾಂತಾ ಶೀಲವಂತ, ಇತರರು ಇದ್ದರು.
Published on:
Copied
Follow Us
ಹುಬ್ಬಳ್ಳಿ: no tet ಕೇಂದ್ರ ಸರ್ಕಾರದ ಎನ್ಸಿಟಿಇ ಆದೇಶದನ್ವಯ ಸೇವಾನಿರತ ಶಿಕ್ಷಕರರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪಾಸಾಗಬೇಕೆಂಬ ಆದೇಶ ರದ್ದುಗೊಳಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಂಸದ ಜಗದೀಶ ಶೆಟ್ಟರ್ ಅವರಿಗೆ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಸೇವಾನಿರತ ಶಿಕ್ಷಕರು ಸೇವೆಗೆ ಸೇರುವ ಮುನ್ನವೇ ಶಿಕ್ಷಕರ ತರಬೇತಿ ಅರ್ಹತಾ ಪರೀಕ್ಷೆ ಪಾಸಾಗಿ ಹುದ್ದೆಗೆ ನೇಮಕವಾಗಿರುತ್ತಾರೆ. 20- 25 ವರ್ಷ ನಿರಂತರ ಸೇವೆ ಸಲ್ಲಿಸಿರುತ್ತಾರೆ. ನಿತ್ಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವದು ದೊಡ್ಡ ಪರೀಕ್ಷೆಯಾಗಿದೆ. ಈಗ ಪುನಃ ಅರ್ಹತಾ ಪರೀಕ್ಷೆ ನಿಗದಿಗೊಳಿಸಿರುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ.
ಕೇಂದ್ರ ಸರ್ಕಾರ ತಕ್ಷಣ ಎನ್ಸಿಟಿಇ ಆದೇಶಕ್ಕೆ ತಿದ್ದುಪಡಿ ತರುವ ಮೂಲಕ ಶಿಕ್ಷಕರಿಗೆ ನಿಗದಿಗೊಳಿಸಿದ ಟಿಇಟಿ ರದ್ದುಗೊಳಿಸಬೇಕೆಂದು ಶಿಕ್ಷಕರು ಮನವಿ ಮಾಡಿದರು.