ಒಂದೂವರೆ ವರ್ಷವಾದರೂ ಸಂಭಾವನೆ ಇಲ್ಲ!

ಕರ್ನಾಟಕ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ
Published on
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ (ಕವಿವಿ) ವ್ಯಾಪ್ತಿಯ ಪದವಿ ಮಹಾವಿದ್ಯಾಲಯಗಳ ವಿವಿಧ ವಿಭಾಗಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿಕೊಟ್ಟ ಬಾಹ್ಯ ಪರೀಕ್ಷಕರಿಗೆ ಕಳೆದ ಮೂರು ಸೆಮಿಸ್ಟರ್‌ಗಳಿಂದ ಸಂಭಾವನೆ ಪಾವತಿಯಾಗಿಲ್ಲ.
ಕವಿವಿ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಕಾಲೇಜುಗಳಲ್ಲಿ ಹಲವು ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್‌ನಲ್ಲಿ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳು ನಡೆಯುತ್ತವೆ. ನಿಯಮಗಳ ಪ್ರಕಾರ ಈ ಪರೀಕ್ಷೆಗಳನ್ನು ನಡೆಸಿಕೊಡಲು ಬೇರೆ ಬೇರೆ ಕಾಲೇಜುಗಳ ಅನುಭವಿ ಉಪನ್ಯಾಸಕರನ್ನು ವಿಶ್ವವಿದ್ಯಾಲಯವು ಬಾಹ್ಯ ಪರೀಕ್ಷಕರನ್ನಾಗಿ ನೇಮಿಸುತ್ತದೆ. ಹೀಗೆ ನೇಮಕೊಂಡು ಅಪರಾಧಶಾಸ್ತ್ರ, ಭೂಗೋಳಶಾಸ್ತ್ರ, ಮನೋವಿಜ್ಞಾನ, ಗಣಕ ವಿಜ್ಞಾನ, ಸಮಾಜಕಾರ್ಯ ಹಾಗೂ ಮನಶಾಸ್ತ್ರ, ಬಿಸಿಎ ಸೇರಿ ಹಲವು ವಿಷಯಗಳ ಪರೀಕ್ಷೆಗಳನ್ನು ನಡೆಸಿಕೊಟ್ಟಿದ್ದಾರೆ. ಬಾಹ್ಯ ಪರೀಕ್ಷಕರು ಸ್ವಂತ ಖರ್ಚಿನಲ್ಲಿ ದೂರದ ಊರಿಗೆ ಪ್ರಯಾಣಿಸಿ, ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಯ ಮೌಲ್ಯಮಾಪನ, ವೈವಾ ನಡೆಸಿದ್ದಾರೆ. ಪರೀಕ್ಷೆ ಮುಗಿದ ತಕ್ಷಣ ಕವಿವಿಗೆ ಬಿಲ್ ಸಲ್ಲಿಸಿದ್ದರೂ ಸಂಭಾವನೆ ನೀಡಿಲ್ಲ. ಕಳೆದ ಒಂದೂವರೆ ವರ್ಷದಿಂದ ಪ್ರಾಯೋಗಿಕ ಪರೀಕ್ಷೆಗಳ ಬಿಲ್‌ಗಳು ವಿವಿ ಹಣಕಾಸು ವಿಭಾಗದಲ್ಲಿ ಬಾಕಿ ಉಳಿದಿವೆ.
ಹಳೇ ಬಾಕಿ ತೀರಿಸಿಲ್ಲ:
ಒಂದು ಸೆಮಿಸ್ಟರ್ ಪರೀಕ್ಷೆ ಮುಗಿದು, ಮುಂದಿನ ಸೆಮಿಸ್ಟರ್ ಆರಂಭದ ವೇಳೆಗೆ ಹಿಂದಿನ ಸಂಭಾವನೆ ಪಾವತಿಸಬೇಕು. ಆದರೆ, ಇಲ್ಲಿ ಮೂರು ಪರೀಕ್ಷೆಗಳು ಮುಗಿದು, ಪ್ರಸ್ತುತ 4ನೇ ಪರೀಕ್ಷೆಗಳು ನಡೆಯುತ್ತಿದ್ದರೂ ಕವಿವಿ ಹಳೆಯ ಬಾಕಿ ತೀರಿಸಿಲ್ಲ. ವಿಶ್ವವಿದ್ಯಾಲಯದ ಮೌಲ್ಯಮಾಪನ ಮತ್ತು ಹಣಕಾಸು ವಿಭಾಗಗಳ ನಡುವಿನ ಸಮನ್ವಯದ ಕೊರತೆ ಹಾಗೂ ಕಡತಗಳ ವಿಲೇವಾರಿಯಲ್ಲಿನ ವಿಳಂಬ ಧೋರಣೆ ಇದಕ್ಕೆ ಕಾರಣ. ಇದು ನಮಗೆ ಆರ್ಥಿಕ ಹೊರೆ ಉಂಟು ಮಾಡಿದೆ ಎಂದು ಬಾಹ್ಯ ಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಉಪನ್ಯಾಸಕರು ಆರೋಪಿಸಿದ್ದಾರೆ. ಹಳೆಯ ಬಾಕಿ ಚುಕ್ತಾ ಮಾಡದಿದ್ದರೆ ಮುಂದಿನ ಪರೀಕ್ಷಾ ಕಾರ್ಯಗಳಿಗೆ ಪರೀಕ್ಷಕರು ಹಿಂದೇಟು ಹಾಕುವ ಸಾಧ್ಯತೆ ಇದೆ. ತಕ್ಷಣ ಕುಲಪತಿಗಳು, ಕುಲಸಚಿವರು ಬಾಕಿ ಬಿಲ್ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ವಿಭಾಗದ ಅಧ್ಯಾಪಕರು ಆಗ್ರಹಿಸಿದ್ದಾರೆ.
ತಕ್ಷಣ ಬಿಲ್ ಬಿಲ್ ಬಿಡುಗಡೆ ಮಾಡಲಿ
"

ಕವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಬಾಹ್ಯ ಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದವರಿಗೆ ಸಂಭಾವನೆ ಬಿಡುಗಡೆಯಾಗಿಲ್ಲ ಎಂಬ ವಿಷಯ ಎಂಟು ದಿನಗಳ ಹಿಂದೆ ಗೊತ್ತಾಗಿದೆ. ಬಾಕಿ ಉಳಿದಿದ್ದ ಬಿಲ್‌ಗಳನ್ನು ವಿಲೇವಾರಿ ಮಾಡಿದ್ದೇವೆ. ಒಂದೆರಡು ದಿನದಲ್ಲಿ ಸಂಭಾವನೆ ಜಮೆಯಾಗಲಿದೆ. ನಾನು ಅಽಕಾರ ವಹಿಸಿಕೊಂಡ ಬಳಿಕ ಯಾವುದೇ ವಿಭಾಗದ ಬಿಲ್ ಬಾಕಿ ಉಳಿದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net