ಕೆಐಎಡಿಬಿ ವಲಯ ಕಚೇರಿ ಸ್ಥಳಾಂತರ ಇಲ್ಲ office

office  ಕೇಂದ್ರ ಸಚಿವ ಪ್ರಲ್ಹಾದ ಜೋಶಿ
office ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂಧಿಸಿದ ರಾಜ್ಯ ಸರ್ಕಾರ.
  • ಸಚಿವ ಎಂ .ಬಿ ಪಾಟೀಲ ಅವರು ಧಾರವಾಡದ ಕೆ.ಐ.ಎ.ಡಿ.ಬಿ. ವಲಯ ಕಚೇರಿಯ ಸ್ಥಳಾಂತರ ಸ್ಥಗಿತಗೊಳಿಸಿದ್ದು, ಇಲ್ಲಿಯೇ ಮುಂದುವರೆಸಲು ಒಪ್ಪಿದ್ದಾರೆ.
  • ಕೈಗಾರಿಕೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಏಕೈಕ ವಲಯ ಕಚೇರಿ ಇದಾಗಿದೆ
ಉತ್ತರ ಕರ್ನಾಟಕದ ಕೈಗಾರಿಕೆ ಅಭಿವೃದ್ಧಿಗೆ ಕಳೆದ 40 ವರ್ಷಗಳಿಂದ ಧಾರವಾಡದ ಕೆ.ಐ.ಎ.ಡಿ.ಬಿ. ವಲಯ ಕಚೇರಿ ಪ್ರಮುಖ ಪಾತ್ರ ವಹಿಸಿದೆ. ಧಾರವಾಡ ಜಿಲ್ಲೆಯ ಕೈಗಾರಿಕೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಏಕೈಕ ವಲಯ ಕಚೇರಿ ಇದಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಸಚಿವ ಪ್ರಲ್ಹಾದ ಜೋಶಿ ಅವರ ಆಗ್ರಹಕ್ಕೆ ಸ್ಪಂಧಿಸಿ, ರಾಜ್ಯ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ .ಬಿ ಪಾಟೀಲ ಅವರು ಧಾರವಾಡದ ಕೆ.ಐ.ಎ.ಡಿ.ಬಿ. ವಲಯ ಕಚೇರಿಯ ಸ್ಥಳಾಂತರ ಸ್ಥಗಿತಗೊಳಿಸಿದ್ದು, ಇಲ್ಲಿಯೇ ಮುಂದುವರೆಸಲು ಒಪ್ಪಿದ್ದಾರೆ.
ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಆಡಳಿತಾತ್ಮಕ ಕಚೇರಿಯ ಅವಶ್ಯಕತೆ ಮನಗಂಡಲ್ಲಿ ಈಗಿರುವ ಕಚೇರಿಗಳನ್ನೂ ಸ್ಥಳಾಂತರಿಸದೆ, ಅವಶ್ಯಕತೆ ಇದ್ದಲ್ಲಿ ಅಲ್ಲಿನ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಹೊಸ ಕಚೇರಿಗಳನ್ನು ಪ್ರಾರಂಭಿಸುವಂತೆಯೂ ಸಚಿವ ಜೋಶಿಯವರು ಪತ್ರ ಬರೆದು ಆಗ್ರಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net