no mobile ಮೊಬೈಲ್​ ಮುಕ್ತ ಕಲಿಕೆಗೆ ಆದ್ಯತೆ

no mobile ಆರ್​ವಿಎಸ್​ ಶಾಲೆ ನಿರ್ಧಾರ
no mobile ಆರ್​ವಿಎಸ್​ ಶಾಲೆ ನಿರ್ಧಾರ
Published on

ಪ್ರಮುಖ ಮುಖ್ಯಾಂಶಗಳು

  • ನವಲಗುಂದ ಆರ್​ವಿಎಸ್​ ಶಾಲೆ ನಿರ್ಧಾರ
  • ಏಕಾಗ್ರತೆ ಹಾಗೂ ಆರೋಗ್ಯಕರ ಕಲಿಕೆಗೆ ಅವಕಾಶ
ಹುಬ್ಬಳ್ಳಿ: no mobile ಮೊಬೈಲ್​ ಮೇಲಿನ ಅವಲಂಬನೆ ತಪ್ಪಿಸಿ ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಆರೋಗ್ಯಕರ ಕಲಿಕೆಗೆ ಅವಕಾಶ ನೀಡುವ ಸಲುವಾಗಿ ನವಲಗುಂದದ ಖನ್ನೂರ ಬಳಿ ಇರುವ ಆರ್​ವಿಎಸ್​ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ವಿನೂತನ ಯೋಜನೆ ರೂಪಿಸಿದೆ.
ಮೊಬೈಲ್​ ಮುಕ್ತ ಶಾಲೆ ಘೋಷಣೆ ಮಾಡಿ ಅದರಂತೆ ಮುಂಬರುವ ಶೈಕ್ಷಣಿಕ ಸಾಲಿನಿಂದ ಮೊಬೈಲ್​ ಆಪ್​ಗಳನ್ನು ದೂರ ಇಟ್ಟು ವಿದ್ಯಾರ್ಥಿ ಕೇಂದ್ರಿತ ಕಲಿಕೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ.
ಆರ್​ವಿಎಸ್​ನಲ್ಲಿ ವಿದ್ಯಾರ್ಥಿಗಳ ಹಿತವೇ ಮೊದಲ ಆದ್ಯತೆಯಾಗಿದ್ದು, ಕಲಿಕೆಗೆ ಮೊಬೈಲ್​ ಅಪ್ಲಿಕೇಶನ್​ಗಳನ್ನು ಪ್ರೋತ್ಸಾಹಿಸದಿರಲು ಮುಂದಾಗಿದೆ.
ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವುದು, ಪರದೆಯಿಂದಾಗುವ ವ್ಯತ್ಯಯ ಕಡಿಮೆ ಮಾಡುವುದು, ತರಗತಿ ಸಂವಹನ ಬಲಪಡಿಸುವುದು, ಆರೋಗ್ಯಕರ ಅಭ್ಯಾಸಗಳಿಗೆ ಒತ್ತು ನೀಡುವುದು, ಪೋಷಕರೊಂದಿಗೆ ನೇರ ಸಂಪರ್ಕ ಸಾಧಿಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿವೆ.
ನಾವು ಪರದೆಯ ಮೇಲೆ ಅಲ್ಲ, ವ್ಯಕ್ತಿತ್ವ ಮತ್ತು ಏಕಾಗ್ರತೆಯ ಮೇಲೆ ನಂಬಿಕೆ ಇಟ್ಟಿದ್ದೇವೆ. ಬುದ್ಧಿ ಸ್ಪರ್ಧೆಗಳಲ್ಲಿ ಗೆಲ್ಲಿಸಿದರೆ ಜೀವನ ಕೌಶಲಗಳು ವಿದ್ಯಾರ್ಥಿಗಳನ್ನು ಬದುಕಿನಲ್ಲಿ ಗೆಲ್ಲಿಸುತ್ತವೆ ಎಂದು ಆರ್​ವಿಎಸ್​ ಶಾಲೆ ಚೇರ್ಮನ್​ ಸುರೇಶ ಅಂಗಡಿ ಅಭಿಪ್ರಾಯಪಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net