NO drugs ಹುಬ್ಬಳ್ಳಿಯ ಸನಾ ಕಾಲೇಜಿನ ವತಿಯಿಂದ ಮಾದಕ ವಸ್ತು ವಿರೋಧಿ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಮೊಹಮ್ಮದ ಹುಸೇನ್ ಮಳಗಿ, ಸಿಕಂದರ್ ಖಾನ್, ನಾಗೇಶ, ಸೋನಿಯಾ ಪದ್ಮಸಿ, ಶೇಖ್ ಮುಜೀಬುರ್ ರೆಹಮಾನ್, ಮೊಹಮ್ಮದ್ ಅಯೂಬ್ ಸವಣೂರ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸನಾ ಕಾಲೇಜಿನಲ್ಲಿ ಮಾದಕ ವಸ್ತು ಜಾಗೃತಿ
ಹುಬ್ಬಳ್ಳಿಯ ವಿವಿಧೆಡೆ ಸಂಚರಿಸಿದ ಜಾಥಾ
ಹುಬ್ಬಳ್ಳಿ: NO drugs ಇಲ್ಲಿಯ ಭೈರಿದೇವರಕೊಪ್ಪದ ಸನಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಮಾದಕ ವಸ್ತು ವಿರೋಧಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಸಮಾಜದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಫಲಕ ಹಿಡಿದು ಘೋಷಣೆ ಕೂಗುವ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಶಾಂತಿನಿಕೇತನ ಕಾಲನಿಯ ರಸ್ತೆಗಳಲ್ಲಿ ವಿದ್ಯಾರ್ಥಿಗಳು ರ್ಯಾಲಿ ನಡೆಸಿದರು.
ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿದ ಜಾಥಾದಲ್ಲಿ ಸಾರ್ವಜನಿಕರು ಸಹ ಭಾಗಿಯಾಗಿ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಪಡೆದರು.
ಸನಾ ಗ್ರೂಪ್ ಅಧ್ಯಕ್ಷ ಮೊಹಮ್ಮದ್ ಹುಸೇನ್ ಮಳಗಿ ರ್ಯಾಲಿಗೆ ಚಾಲನೆ ನೀಡಿದರು. ಸನಾ ಗ್ರೂಪ್ನ ವಿವಿಧ ಶಿಕ್ಷಣ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.