no bandh ಬಂದ್‌ಗೆ ಹುಬ್ಬಳ್ಳಿಯಲ್ಲಿಲ್ಲ ಸ್ಪಂದನೆ

no bandh ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದಿಂದ ಸಾರ್ವಜನಿಕರಿಗೆ ಗುರುವಾರ ಗುಲಾಬಿ ಹೂವು ನೀಡಿ ಬಂದ್ ಇಲ್ಲವೆಂದು ಧೈರ್ಯ ತುಂಬಲಾಯಿತು.
no bandh ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದಿಂದ ಸಾರ್ವಜನಿಕರಿಗೆ ಗುರುವಾರ ಗುಲಾಬಿ ಹೂವು ನೀಡಿ ಬಂದ್ ಇಲ್ಲವೆಂದು ಧೈರ್ಯ ತುಂಬಲಾಯಿತು.
Published on

ಹುಬ್ಬಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು

no bandh

ಖಂಡಿಸಿ ಕನ್ನಡಪರ ಸಂಘಟನೆಗಳ ಗುರುವಾರ ಕರೆ ನೀಡಿದ್ದ ಬಂದ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸ್ಪಂದನೆ ವ್ಯಕ್ತವಾಗಿಲ್ಲ.

ಕನ್ನಡಪರ ಸಂಘಟನೆಗಳ ಮುಖಂಡರೂ ಅಷ್ಟೊಂದು ಹುರುಪು ತೋರಿಲ್ಲ. ಪರಿಣಾಮವಾಗಿ ಎಂದಿನಂತೆ ಅಂಗಡಿ-ಮುಂಗಟ್ಟು ತೆರೆದಿದ್ದವು. ವಾಹನ ಸಂಚಾರ ನಿರಂತರವಾಗಿತ್ತು.
ಶಾಲಾ-ಕಾಲೇಜ್‌ಗಳಿಗೆ ವಿದ್ಯಾರ್ಥಿಗಳು ತೆರಳಿದರೆ, ನೌಕರರು ಸರ್ಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದರು. ಹೋರಾಟಕ್ಕೂ -ಜನಜೀವನಕ್ಕೂ ಸಂಬಂಧವಿಲ್ಲದ ಬಂದ್‌ನ ವಾತಾವರಣವಿತ್ತು.
ಗುಲಾಬಿ ಹೂವು ವಿತರಣೆ: ಹುಬ್ಬಳ್ಳಿಯಲ್ಲಿ ಬಂದ್ ಇಲ್ಲವೆಂದು ಹೇಳಿ ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ಧೈರ್ಯ ತುಂಬುವ ಕೆಲಸವನ್ನು ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದಿಂದ ಮಾಡಲಾಯಿತು.
ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಜನತಾ ಬಜಾರ್, ಕೊಯಿನ್ ರಸ್ತೆ ಸೇರಿ ಇತರೆಡೆ ತೆರಳಿದ ಸಂಘದ ಪದಾಧಿಕಾರಿಗಳು ಹಾಗೂ ಆಟೋ ಚಾಲಕರು, ಹುಬ್ಬಳ್ಳಿಯಲ್ಲಿ ಬಂದ್ ಇಲ್ಲ. ತಾವು ಧೈರ್ಯವಾಗಿ ಸಂಚರಿಸಬಹುದು ಎಂದು ತಿಳಿವಳಿಕೆ ನೀಡಿದರು.
ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಪ್ರಮುಖರಾದ ಮುರಳಿ ಇಂಗಳಹಳ್ಳಿ, ದಾವಲಸಾಬ್ ಕುರಹಟ್ಟಿ, ಮಂಜುನಾಥ ಯರಗಂಬಳಿಮಠ, ರಾಜೇಶ ಬಿಜವಾಡ, ಶಂಕರ ಆಚಾರ್ಯ, ಮಹೇಶ ದೊಡ್ಡಮನಿ, ಮಾರುತಿ ಅಂಚಟಗೇರಿ ಸೇರಿದಂತೆ ಬಹಳಷ್ಟು ಆಟೋ ಚಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net