ನವನವೀನ ವೈಜ್ಞಾನಿಕ ಪರಿಕಲ್ಪನೆಗಳು ಅಗತ್ಯ

 ಪ್ರೊ. ಎಸ್.ಟಿ. ನಂದಿಬೇವೂರ
ಪ್ರೊ. ಎಸ್.ಟಿ. ನಂದಿಬೇವೂರ
Published on
ಧಾರವಾಡ: ಮೂಲ ವಿಜ್ಞಾನದ ಅರಿವಿಲ್ಲದಿದ್ದರೆ ಹೊಸತೇನನ್ನೂ ಶೋಧಿಸಲಾಗುವುದಿಲ್ಲ. ಮೂಲವಿಜ್ಞಾನವನ್ನು ಅನ್ವಯಿಕ ವಿಜ್ಞಾನವನ್ನಾಗಿ ಬಳಸಿಕೊಂಡು ನವನವೀನ, ವೈಜ್ಞಾನಿಕ ಪರಿಕಲ್ಪನೆಗಳನ್ನು ತಂತ್ರಜ್ಞಾನದ ನೆರವಿನಿಂದ ಸಾಕಾರಗೊಳಿಸಬಹುದು ಎಂದು ರಸಾಯನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಟಿ. ನಂದಿಬೇವೂರ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ವೈಜ್ಞಾನಿಕ ಉಪಕರಣಗಳ ಕೇಂದ್ರ (ಯುಸಿಕ್)ವು ನವದೆಹಲಿಯ ವಿಜ್ಞಾನತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ಸಹಯೋಗದೊಂದಿಗೆ ಪಿಎಂ ರೂಷಾ ಯೋಜನೆಯಡಿ ಮೂರು ದಿನಗಳ ಕಾಲ ಆಯೋಜಿಸಿದ್ದ ಅತ್ಯಾಧುನಿಕ ವಿಶ್ಲೇಷಣಾತ್ಮಕ ಉಪಕರಣಗಳು ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಎಲ್ಲರೂ ಕೃತಕ ಬುದ್ಧಿಮತ್ತೆಯ ಕುರಿತು ಜಪಿಸುತ್ತಿರುವಾಗ ಅದಕ್ಕೆ ತಾಯಿಯಂತಿರುವ ಮೂಲವಿಜ್ಞಾನವನ್ನು ಮರೆಯದೇ ಅರಿತುಕೊಳ್ಳುವುದು ಅವಶ್ಯಕವಾಗಿದೆ. ಇಲ್ಲಿಯವರೆಗಿನ ಹೆಚ್ಚಿನ ನೊಬೆಲ್ ಪ್ರಶಸ್ತಿಗಳು ಬಂದಿರುವುದು ಮೂಲವಿಜ್ಞಾನ ಕ್ಷೇತ್ರಕ್ಕೆ ಎಂಬುದನ್ನು ಗಮನಿಸಿದಾಗ ಮೂಲವಿಜ್ಞಾನದ ಮಹತ್ವ ಗೊತ್ತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ. ಡೆವಿಡ್ ಮಾತನಾಡಿ, ನಮ್ಮ ದೇಶದ ಎಷ್ಟೋ ಗಿಡಮೂಲಿಕೆಗಳ ಕುರಿತು ಸಂಶೋಧನೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ವಿದೇಶಿಗರು ಸಂಶೋಧನೆ ಮಾಡಿ ನಮ್ಮ ನೆಲದ ಗಿಡಮೂಲಿಕೆಗಳ ಔಷಽಗಳ ಉತ್ಪಾದನೆಗಾಗಿ ಪೆಟೆಂಟ್ ಪಡೆದು ಶ್ರೀಮಂತರಾಗುತ್ತಿದ್ದಾರೆ. ಈ ದಿಶೆಯಲ್ಲಿ ನಮ್ಮ ಯುವಸಂಶೋಧಕರು ಗಮನ ಹರಿಸಬೇಕು ಎಂದರು.
ವಿಶ್ವವಿದ್ಯಾಲಯದ ವೈಜ್ಞಾನಿಕ ಉಪಕರಣಗಳ ಕೇಂದ್ರದ ನಿರ್ದೇಶಕ ಪ್ರೊ. ರವೀಂದ್ರ ಕಾಂಬಳೆ ವೇದಿಕೆಯಲ್ಲಿದ್ದರು. ಭೌತಶಾಸ್ತ್ರ ವಿಭಾಗದ ಪ್ರೊ. ರಾಜಶೇಖರ ಭಜಂತ್ರಿ ಪರಿಚಯಿಸಿದರು. ಡಾ. ಪ್ರವೀಣ ಕುಮಾರ ಎಸ್.ಕೆ. ಸ್ವಾಗತಿಸಿದರು. ಡಾ.ವಿಶ್ವನಾಥ ಚಚಡಿ ನಿರೂಪಿಸಿದರು. ಡಾ. ರವೀಂದ್ರ ಚೌಗಲೆ, ಡಾ.ಲೋಕೇಶ ಶಾಸ್ತ್ರಿ ಶಿವಕುಮಾರ ಮ್ಯಗೋಟಿ, ಗಣೇಶ ಕುಂದರಗಿ, ಸಿ.ಆರ್. ಭಾರತಿ, ಸಿದ್ದರಾಮ ಹಿಪ್ಪರಗಿ, ಮಹಾಂತೇಶ ಕೋಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net