ನವನಗರ ಪಂಚಮುಖಿ ಆಂಜನೇಯ ಜಾತ್ರೆ 20ರಿಂದ

ಹುಬ್ಬಳ್ಳಿ ನವನಗರ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ನ. 20ರಿಂದ ಧಾರ್ಮಿಕ  ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಲ್ಲಯ್ಯ ಹಿರೇಮಠ ತಿಳಿಸಿದರು.
ಹುಬ್ಬಳ್ಳಿ ನವನಗರ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ನ. 20ರಿಂದ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಲ್ಲಯ್ಯ ಹಿರೇಮಠ ತಿಳಿಸಿದರು.
Published on
ಹುಬ್ಬಳ್ಳಿ: ನವನಗರ ಕೆಎಚ್‌ಬಿ ಕಾಲನಿ ನಂದೀಶ್ವರ ನಗರದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ 11ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ನ. 20ರಿಂದ 24ರವರೆಗೆ ಧಾರ್ಮಿಕ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನವನಗರ ನವನಿರ್ಮಾಣ ಸಂಘದ ಕಾರ್ಯಾಧ್ಯಕ್ಷ ಮಲ್ಲಯ್ಯ ಹಿರೇಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 20ರಂದು ಸಂಜೆ 4ಕ್ಕೆ ಬಿಆರ್‌ಟಿಎಸ್ ರಸ್ತೆ ಹತ್ತಿರದ ಹನುಮಾನ್ ಮಂದಿರದಿಂದ ಪಲ್ಲಕ್ಕಿ ಉತ್ಸವ ಆರಂಭವಾಗಿ ನಂದೀಶ್ವರ ನಗರದವರೆಗೆ ಸಾಗಲಿದೆ. 21ರಂದು ಸಂಜೆ 7ಕ್ಕೆ ಮಂಗಳೂರು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ. 22ರಂದು ಬೆಳಗ್ಗೆ 10ಕ್ಕೆ ದೇವಸ್ಥಾನದಲ್ಲಿ ಹೋಮ, ಹವನ, ಪೂಜೆ ಇರುತ್ತದೆ. ಸಂಜೆ 7ಕ್ಕೆ ಮನರಂಜನಾ ಕಾರ್ಯಕ್ರಮ. 23ರಂದು ಸಂಜೆ 7ಕ್ಕೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ‘ಮಿಸ್ಟರ್ ಕರ್ನಾಟಕ ಭಜರಂಗಿ’ ಏರ್ಪಡಿಸಲಾಗಿದೆ. 24ರಂದು ಸಂಜೆ 7ಕ್ಕೆ ನೃತ್ಯ ಕಾರ್ಯಕ್ರಮವಿದೆ ಎಂದರು.
ಸುನೀಲ ರೇವಣಕರ ಮಾತನಾಡಿ, 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ನಗರ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ 1 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ನಿತ್ಯ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಹಂಚಿನಮನಿ, ಯಲ್ಪಪ್ಪ ಕೊರವರ, ಶರೀಫ ಮುಲ್ಲಾ, ಎಲ್. ಗುಡಮಿ, ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net