national award ಡಾ. ವೆಂಕಟರಾಮ ಕಟ್ಟಿಗೆ ರಾಷ್ಟ್ರೀಯ ಗೌರವ

national award ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯ ಡಾ. ವೆಂಕಟರಾಮ ಕಟ್ಟಿ ಅವರಿಗೆ ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಬುಧವಾರ ಸನ್ಮಾನಿಸಲಾಯಿತು. ಮದನ, ಐಎಂಎ ಅಧ್ಯಕ್ಷ ಡಾ. ಬಸವರಾಜ ಸಜ್ಜನರ, ಡಾ. ಪ್ರಿಯಾ ಕಟ್ಟಿ, ಡಾ. ಅನುಜಾ ದೇಸಾಯಿ ಇದ್ದರು.
national award ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯ ಡಾ. ವೆಂಕಟರಾಮ ಕಟ್ಟಿ ಅವರಿಗೆ ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಬುಧವಾರ ಸನ್ಮಾನಿಸಲಾಯಿತು. ಮದನ, ಐಎಂಎ ಅಧ್ಯಕ್ಷ ಡಾ. ಬಸವರಾಜ ಸಜ್ಜನರ, ಡಾ. ಪ್ರಿಯಾ ಕಟ್ಟಿ, ಡಾ. ಅನುಜಾ ದೇಸಾಯಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮುದಾಯ ಸೇವಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ
  • ಸಾಮಾಜಿಕ ಕಳಕಳಿ ಹೊಂದಿರುವ ವೈದ್ಯರು
ಹುಬ್ಬಳ್ಳಿ: national award ಸಹಾನುಭೂತಿ ಹಾಗೂ ವಿನಮ್ರತೆಯೊಂದಿಗೆ ಸಾರ್ವಜನಿಕ ಸೇವೆ ಮಾಡುತ್ತಿರುವ ಜಯಪ್ರಿಯಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವೆಂಕಟರಾಮ ಕಟ್ಟಿ ಅವರಿಗೆ ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ ಅರಸಿ ಬಂದಿದೆ ಎಂದು ಭಾರತೀಯ ವೈದ್ಯಕಿಯ ಸಂಸ್ಥೆ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ಬಸವರಾಜ ಸಜ್ಜನರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರಲ್ಲಿ ಇರಬೇಕಾದ ಪ್ರಮುಖ ಗುಣಗಳು ಡಾ. ಕಟ್ಟಿ ಅವರಲ್ಲಿ ಇವೆ. ಅವರ ನಿಸ್ವಾರ್ಥ ವೈದ್ಯಕಿಯ ಸೇವೆ ಮನ್ನಿಸಿ ಇತ್ತೀಚೆಗೆ ದೆಹಲಿಯಲ್ಲಿ ಐಎಂಎ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವ ರಾಜನಾಥ್​ಸಿಂಗ್​ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದರು.
ಡಾ. ವೆಂಕಟರಾಮ ಅವರು ಸಾಮಾಜಿಕ ಕಳಕಳಿ ಹೊಂದಿರುವ ವೈದ್ಯರು. ಗ್ರಾಮೀಣ ಭಾಗದಲ್ಲಿ ಅನೇಕ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಜನರ ಮನೆ ಬಾಗಿಲಿಗೆ ವೈದ್ಯಕಿಯ ಸೇವೆ ಕೊಂಡೊಯ್ದವರು. ಇಲ್ಲಿಯವರೆಗೆ 90 ಸಾವಿರ ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಸಮುದಾಯ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಈ ಪ್ರಶಸ್ತಿ ಪಡೆದ ಮೊದಲಿಗರಾಗಿದ್ದಾರೆ. ಇದುವರೆಗೂ 300 ಚಿಕ್ಕ ಮಕ್ಕಳಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಬಂದಿರುವ ಡಾ. ವೆಂಕಟರಾಮ ಕಟ್ಟಿ ಅವರು, ಸಂತಸ ಹಂಚಿಕೊಂಡರು. ಜಯಪ್ರಿಯಾ ಕಣ್ಣಿನ ಆಸ್ಪತ್ರೆಯು ಯಾರೊಬ್ಬರೂ ದೃಷ್ಟೀಹಿನರಾಗಿ ಇರಬಾರದು ಎಂಬ ದೃಷ್ಟಿಯಿಂದ ಉಚಿತವಾಗಿ ತಪಾಸಣೆ ಹಾಗೂ ಸರ್ಜರಿ ಮಾಡುತ್ತಿದೆ. ಇದಕ್ಕಾಗಿ ಗ್ರಾಮೀಣ ಭಾಗದಲ್ಲಿ ಉಚಿತ ತಪಾಸಣೆ ಶಿಬಿರಗಳನ್ನು ನಡೆಸುತ್ತಿದೆ. 12.4 ಲಕ್ಷಕ್ಕಿಂತ ಹೆಚ್ಚು ಜನರ ಉಚಿತ ಕಣ್ಣಿನ ತಪಾಸಣೆ ಮಾಡಲಾಗಿದೆ. 90ಸಾವಿರ ಜನರಿಗೆ ಉಚಿತ ಕಣ್ಣಿನ ಕ್ಯಾಟರ್ಯಾಕ್ಟ್​ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.
ದೃಷ್ಟಿ ನೀಡುವ ಈ ಮಹತ್ವದ ಕಾರ್ಯ ಮುಂದುವರಿಯಲಿದ್ದು, ಸುಮಾರು 2 ಲಕ್ಷ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಮಹಿಳಾ ಸಬಲೀಕರಣದ ಉದ್ದೇಶದಿಂದ ಡಿಪ್ಲೋಮಾ ಇನ್​ ಆಪ್ತಾಲ್ಮಿಕ್​ ಅಸಿಸ್ಟೆಂಟ್​ ಕೋರ್ಸ್​ ಅನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ಹಲವು ಗ್ರಾಮಗಳನ್ನು ದತ್ತು ತೆಗೆದುಕೊಂಡು ಶಿಬಿರಗಳ ಮೂಲಕ ಅನೇಕ ಜನರಿಗೆ ಸರ್ಜರಿ ಮಾಡಲಾಗಿದೆ. ಆಪರೇಶನ್​ ನಂತರವೂ ಸರಿಯಾದ ಉಪಚಾರ ಮಾಡುವ ಮೂಲಕ ದೃಷ್ಟಿ ಒದಗಿಸಲಾಗಿದೆ.
ಡಾ. ಪ್ರಿಯಾ ಕಟ್ಟಿ, ಡಾ. ಅನುಜಾ ದೇಸಾಯಿ, ಮಧನ, ವೈಷ್ಣವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net