shree nandi properties ಶ್ರೀ ನಂದಿ ಪ್ರಾಪರ್ಟಿಸ್ ನಿಂದ ಕ್ಯಾಲೆಂಡರ್​ ಬಿಡುಗಡೆ

nandi properties ಹುಬ್ಬಳ್ಳಿಯಲ್ಲಿ ಶ್ರೀ ನಂದಿ ಪ್ರಾಪರ್ಟಿಸ್ 2026 ಕ್ಯಾಲೆಂಡರ್​ ಅನ್ನು ಸಂಸ್ಥೆಯ ಎಂಡಿ ಬಸವರಾಜ ನಿಲೋಗಲ್​ ಬಿಡುಗಡೆ ಮಾಡಿದರು.
nandi properties ಹುಬ್ಬಳ್ಳಿಯಲ್ಲಿ ಶ್ರೀ ನಂದಿ ಪ್ರಾಪರ್ಟಿಸ್ 2026 ಕ್ಯಾಲೆಂಡರ್​ ಅನ್ನು ಸಂಸ್ಥೆಯ ಎಂಡಿ ಬಸವರಾಜ ನಿಲೋಗಲ್​ ಬಿಡುಗಡೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಿಗೆ ಉಚಿತ ವಿತರಣೆ
  • ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಸಂದೇಶಗಳು
ರಿಯಲ್​ ಎಸ್ಟೇಟ್​ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಸಾರ್ವಜನಿಕ ರಂಗದಲ್ಲಿ ಹೆಸರು ಮಾಡಿರುವ ಶ್ರೀ ನಂದಿ ಪ್ರಾಪರ್ಟಿಸ್​ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ನಿಲೋಗಲ್​ ಅವರು ಇತ್ತೀಚೆಗೆ ಕ್ಯಾಲೆಂಡರ್​ ಬಿಡುಗಡೆ ಮಾಡಿದ್ದಾರೆ.
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅತ್ಯಂತ ಸರಳ ಹಾಗೂ ಮಾದರಿ ಜೀವನ ನಡೆಸಿದವರು. ಅವರ ಹಿತನುಡಿಗಳು ನಮಗೆಲ್ಲ ಪ್ರೇರಣೆಯಾಗಿವೆ. ಅವರ ಶ್ರೀವಾಣಿ, ಹಿತನುಡಿಗಳು ಎಲ್ಲರಿಗೂ ತಲುಪುವ ಉದ್ದೇಶದಿಂದ ಕ್ಯಾಲೆಂಡರ್​ ಮೂಲಕ ಪಸರಿಸುವ ಕೆಲಸ ಮಾಡುತ್ತಿದ್ದಾರೆ.
ಜ. 2ರಂದು ವಿಜಯಪುರದಲ್ಲಿ ಶ್ರೀಗಳ ಗುರುನಮನ ಕಾರ್ಯಕ್ರಮ ನಡೆಯುತ್ತಿದ್ದು, ಅಲ್ಲಿಯೂ ಕ್ಯಾಲೆಂಡರ್​ ಉಚಿತ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಕ್ಯಾಲೆಂಡರ್​ನಲ್ಲಿರುವ ಕ್ಯೂ ಆರ್​ ಕೋಡ್​ ಸ್ಕಾನ್​ ಮಾಡಿದರೆ ಶ್ರೀಗಳ ವಾಣಿ, ಸಂದೇಶಗಳು, ಪ್ರವಚನ ಸಾರ ಎಲ್ಲವೂ ಲಭ್ಯವಾಗಲಿದೆ. ಜನರು ಅವರ ಆದರ್ಶ, ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಆಶಯ ನಮ್ಮದು ಎಂದು ನಿಲೋಗಲ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net