(nagalakshmi choudari) ಬೆಡ್, ಔಷಧೋಪಚಾರ ಮಾಹಿತಿ ಸಂಗ್ರಹ

ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ (nagalakshmi choudari)ಡಾ. ನಾಗಲಕ್ಷ್ಮೀ ಚೌಧರಿ ಭಾನುವಾರ ಭೇಟಿ ನೀಡಿದರು.
ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ (nagalakshmi choudari)ಡಾ. ನಾಗಲಕ್ಷ್ಮೀ ಚೌಧರಿ ಭಾನುವಾರ ಭೇಟಿ ನೀಡಿದರು.
Published on
ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಗೆ (ಕೆಎಂಸಿಆರ್‌ಐ) ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ (nagalakshmi choudari)ಭಾನುವಾರ ಭೇಟಿ ನೀಡಿ, ಹಲವು ಸಮಸ್ಯೆಗಳನ್ನು ಆಲಿಸಿದರು.
ತಾಯಿ ಮತ್ತು ಮಕ್ಕಳ ವಿಭಾಗ(ಎಂಸಿಎಚ್), ಹಳೆಯ ಕಟ್ಟಡ, ಮಕ್ಕಳ ತೀವ್ರ ನಿಗಾ ಘಟಕಕ್ಕೆ ತೆರಳಿ, ರೋಗಿಗಳು ಮತ್ತು ಸಂಬಂಧಿಕರ ಜತೆಗೆ ಚರ್ಚಿಸಿದರು. ಬೆಡ್ ಸವಲತ್ತು, ವೈದ್ಯರ ಔಷಧೋಪಚಾರ ಕುರಿತು ತಿಳಿದುಕೊಂಡರು.
ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳು ಮಲಗುತ್ತಾರೆ. ಬೆಡ್ ಇಲ್ಲವೆಂದು ಸಾಗ ಹಾಕುತ್ತಾರೆ. ಸಿಬ್ಬಂದಿ ವರ್ತನೆ ಸರಿಯಿಲ್ಲ ಎಂದು ರೋಗಿಗಳ ಸಂಬಂಧಿಕರು ಸಮಸ್ಯೆ ತಿಳಿಸಿದರು. ರೋಗಿಯೊಂದಿಗೆ ಇಬ್ಬರು ಸಂಬಂಧಿಕರನ್ನು ಬಿಡಬೇಕು ಎಂದು ಮನವಿ ಮಾಡಿದರು.
ಸಮಸ್ಯೆ ಆಲಿಸಿದ ಡಾ. ನಾಗಲಕ್ಷ್ಮೀ, ರೋಗಿಗಳೊಂದಿಗೆ ವೈದ್ಯಕೀಯ ಸಿಬ್ಬಂದಿ ವರ್ತನೆ ಚೆನ್ನಾಗಿರಬೇಕು. ಬಿಸಿನೀರಿನ ವ್ಯವಸ್ಥೆ ಮಾಡಬೇಕು. ಅಲ್ಲದೇ ಸಮಸ್ಯೆ ನಿವಾರಿಸಿದ್ದರ ಕುರಿತು 15 ದಿನದೊಳಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ನಿರ್ದೇಶಕ ಡಾ. ಈಶ್ವರ ಹೊಸಮನಿ ಅವರಿಗೆ ಸೂಚಿಸಿದರು.
ನಿರ್ದೇಶಕ ಡಾ.ಈಶ್ವರ ಹೊಸಮನಿ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಡಾ. ರಾಮಲಿಂಗಪ್ಪ ಅಂಟರತಾನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net