ನಾಡಪ್ರಭು ಕೆಂಪೇಗೌಡ ಜಯಂತ್ಸುತ್ಸವ

ಕೆಂಪೆಗೌಡ ಜಯಂತಿ ಉದ್ಘಾಟನೆ
ಕೆಂಪೆಗೌಡ ಜಯಂತಿ ಉದ್ಘಾಟನೆ
Published on
ಧಾರವಾಡ: ಕರ್ನಾಟಕ ಇತಿಹಾಸದಲ್ಲಿ ಬಹಳಷ್ಟು ರಾಜಮಹಾರಾಜರು ಆಗಿಹೋಗಿದ್ದಾರೆ. ಆದರೆ, ಕೆಂಪೇಗೌಡರು ಬೆಂಗಳೂರು ನಗರ ನಿರ್ಣಮಾ ಮಾಡವ ಮೂಲಕ ಇಂದು ವಿಶ್ವದ ಭೂಪಟದಲ್ಲಿ ಬೆಂಗಳೂರು ಎದ್ದು ಕಾಣುವಂತೆ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಸುತ್ಸವ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡ ಅವರು 500 ವರ್ಷಗಳ ಹಿಂದೆ ಹಾಕಿಕೊಟ್ಟ ದೂರದೃಷ್ಟಿಯ ಯೋಜನೆಗಳು ಕರ್ನಾಟಕಕ್ಕೆ ಇಂದಿಗೂ ಪ್ರಸ್ತುತವಾಗಿವೆ. ಕೆಂಪೇಗೌಡರ ಸರ್ವಧರ್ಮ ಸಮನ್ವಯತೆ, ಯೋಜನಾಬದ್ಧ ನಗರ ನಿರ್ಮಾಣ ಕಾರ್ಯ, ಕೃಷಿ ಪರಿಸರ ಬೆಳವಣಿಗೆಗೆ ಜಾರಿಗೆ ತಂದ ನೀತಿಗಳು, ವ್ಯಾಪಾರ, ವಾಣಿಜ್ಯ, ಉದ್ಯೋಗಕ್ಕಾಗಿ ಅವರು ಅಂದು ಹಾಕಿಕೊಟ್ಟ ಯೋಜನೆಗಳೇ ಇಂದಿಗೂ ಮಾದರಿಯಾಗಿದೆ. ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಕಾರಣ ಕೆಂಪೇಗೌಡರ ಕೊಡುಗೆಗಳು ಎಂದರು.
ಹುಬ್ಬಳ್ಳಿ ವರದ ಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ, ಕಾರ್ಯದರ್ಶಿ ಸಿದ್ದು ಸಿರಸಂಗಿ ಅವರು ನಾಡಪ್ರಭು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಜಯಲಕ್ಷ್ಮ ಎಚ್. ನಿರೂಪಿಸಿದರು.
ಹು-ಧಾ ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ, ಸಮಾಜದ ಮುಖಂಡರಾದ ಕೃಷ್ಣಗೌಡ, ರಾಘವೇಂದ್ರಗೌಡ, ಮಾಣಿಕ್ಯ ಚಿಲ್ಲೂರ, ಹನುಮಂತಪ್ಪ ನೇಗಿನಾಳ ಇದ್ದರು. ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು, ಸಂಘ-ಸಮಾಜದ ಮುಖಂಡರು, ಕಲಾವಿದರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net