ಎಸ್​ಡಿಎಂ SDM ವೈದ್ಯಕಿಯ ಕಾಲೇಜು ಆಸ್ಪತ್ರೆಗೆ ಎನ್​ಎಬಿಎಚ್​ NABH ಮಾನ್ಯತೆ

ಡಾ. ಮಖ್ದೂಮ್​ ಕಿಲ್ಲೇದಾರ ಅವರು ಎನ್​ಎಬಿಎಚ್​  ಮಾನ್ಯತಾ ಪ್ರಮಾಣಪತ್ರವನ್ನು ವೈದ್ಯಕಿಯ ನಿರ್ದೇಶಕ ಡಾ. ನಿರಂಜನ್​ ಕುಮಾರ್​ ಅವರಿಗೆ ಹಸ್ತಾಂತರಿಸಿದರು.
ಡಾ. ಮಖ್ದೂಮ್​ ಕಿಲ್ಲೇದಾರ ಅವರು ಎನ್​ಎಬಿಎಚ್​ ಮಾನ್ಯತಾ ಪ್ರಮಾಣಪತ್ರವನ್ನು ವೈದ್ಯಕಿಯ ನಿರ್ದೇಶಕ ಡಾ. ನಿರಂಜನ್​ ಕುಮಾರ್​ ಅವರಿಗೆ ಹಸ್ತಾಂತರಿಸಿದರು.
Published on
ಧಾರವಾಡ: ನಗರದ ಎಸ್​ಡಿಎಂ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಗೆ ಎನ್​ಎಬಿಎಚ್​ (ರಾಷ್ಟ್ರೀಯ ಮಾನ್ಯತಾ ಮಂಡಳಿ) ಮಾನ್ಯತೆ ಲಭಿಸಿದೆ. ಮಾನ್ಯತೆ ಪ್ರಕ್ರಿಯೆಯು 2021ರಲ್ಲಿ ಆರಂಭವಾಗಿ 2025ರ ಜೂನ್​ನಲ್ಲಿ ಎನ್​ಎಬಿಎಚ್​ ಪರೀವಿಕ್ಷಣೆ ನಡೆದು ಮಾನ್ಯತೆ ಲಭಿಸಿದೆ.
ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕಿಯ ಅಧೀಕ್ಷಕ ಡಾ. ಕಿರಣ್​ ಹೆಗ್ಡೆ ಮತ್ತು ಉಪ ವೈದ್ಯಕಿಯ ಅಧೀಕ್ಷಕ ಮತ್ತು ಗುಣಮಟ್ಟ ಭರವಸೆ ಕೋಶದ ಮುಖ್ಯಸ್ಥ ಡಾ. ಮಖ್ದೂಮ್​ ಕಿಲ್ಲೇದಾರ ಅವರು ಎನ್​ಎಬಿಎಚ್​ ಮಾನ್ಯತಾ ಪ್ರಮಾಣಪತ್ರವನ್ನು ವೈದ್ಯಕಿಯ ನಿರ್ದೇಶಕ ಡಾ. ನಿರಂಜನ್​ ಕುಮಾರ್​ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಡಾ. ನಿರಂಜನ್​ ಕುಮಾರ್​ ಮಾತನಾಡಿ, ದೈನಂದಿನ ಕೆಲಸದಲ್ಲಿ ಗುಣಮಟ್ಟದ ಸೇವೆಯ ಕಡೆ ಗಮನವಿರಬೇಕು. ಉದ್ಯೋಗದಲ್ಲಿ ಪರಿರ್ಪೂಣತೆಯು ಧ್ಯೇಯವಾಗಬೇಕು. ರೋಗಿಗಳಿಗೆ ಸೇವೆ ಸಲ್ಲಿಸುವಾಗ ದಕ್ಷತೆ ಮತ್ತು ಪ್ರೀತಿ ಇರಬೇಕು ಎಂದರು.
ಸಹ ಉಪ ಕುಲಪತಿ ವಿ. ಜೀವಂಧರ್​ ಕುಮಾರ್​, ಆಡಳಿತ ನಿರ್ದೇಶಕ ಸಾಕೇತ್​ ಶೆಟ್ಟಿ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಪ್ರಾಚಾರ್ಯ ಡಾ. ವಿಜಯ್​ ಕುಲಕಣಿರ್, ಕೋರ್​ ಕಮಿಟಿ ಮತ್ತು ಸ್ಟೀರಿಂಗ್​ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net