ವಿಶ್ವೇಶ್ವರ ನಗರದ ಡಿಫೆನ್ಸ್ (Defence) ಲ್ಯಾಂಡ್ನಲ್ಲಿ ಮ್ಯೂಸಿಯಂ ?
ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರುವ ರಕ್ಷಣಾ ಇಲಾಖೆಗೆ (Defence) ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಹಿರಿಯ ಸೇನಾಧಿಕಾರಿ ದಿವ್ಯಾ, ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಕ್ಯಾ. ಮಣಿವಣ್ಣನ್ ಭಾಗವಹಿಸಿದ್ದರು.
ರಸ್ತೆ ನಿರ್ವಿುಸುವುದಕ್ಕೂ ರಕ್ಷಣಾ ಇಲಾಖೆಯವರು ಅನುಮತಿ ನೀಡುತ್ತಿಲ್ಲ.
ಯುವಕರಿಗೆ ಸೇನಾಪಡೆ ಸೇರಲು ಸ್ಪೂರ್ತಿ .
ಜಾಗ ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿ ಇರುತ್ತದೆ.
ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ಮಾತುಕತೆ ನಡೆಸಲಾಯಿತು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಕರ್ನಾಟಕದಲ್ಲಿರುವ ಭಾರತೀಯ ಸೇನೆಯ ಜಾಗದ ಸಂಯೋಜನಾಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಹಾಗೂ ಹಿರಿಯ ಸೇನಾಧಿಕಾರಿ ದಿವ್ಯಾ ಅವರೊಂದಿಗೆ ನಡೆದ ಸಭೆಯಲ್ಲಿ ಹುಬ್ಬಳ್ಳಿ ವಿಶ್ವೇಶ್ವರ ನಗರದಲ್ಲಿರುವ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಜಾಗದ ಕುರಿತು ಒಂದು ತಾಸಿಗೂ ಹೆಚ್ಚು ಚರ್ಚೆ ನಡೆಯಿತು.
ಇಲ್ಲಿನ ವಿಶ್ವೇಶ್ವರ ನಗರದಲ್ಲಿರುವ ರಕ್ಷಣಾ ಇಲಾಖೆ ಜಾಗದಕ್ಕೆ ಕಳೆದ ವಾರವಷ್ಟೇ ಎನ್ಸಿಸಿ ಕರ್ನಾಟಕದ ಹಿರಿಯ ಅಧಿಕಾರಿ ಅರುಣಕುಮಾರ ಅವರು ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆ ಮಹತ್ವ ಪಡೆದುಕೊಂಡಿತ್ತು.
ವಿಶ್ವೇಶ್ವರ ನಗರದಲ್ಲಿ ರಕ್ಷಣಾ ಇಲಾಖೆಗೆ ಸೇರಿರುವ 17.1 ಎಕರೆ ಜಾಗ ಇದೆ. ಈ ಜಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಿಷಜಂತುಗಳ ತಾಣವಾಗಿದೆ. ಈ ಜಾಗವನ್ನು ಸ್ವಚ್ಛ ಮಾಡುವುದಕ್ಕಾಗಲಿ, ಅಭಿವೃದ್ಧಿಗೊಳಿಸುವುದಕ್ಕಾಗಲಿ ರಕ್ಷಣಾ ಇಲಾಖೆ ಅವಕಾಶ ನೀಡುತ್ತಿಲ್ಲ.
ಈ ಜಾಗದಿಂದ ಮುಖ್ಯ ರಸ್ತೆ ಸಂರ್ಪಸುವ ಜಾಗದಲ್ಲಿ ಡಾಂಬರೀಕರಣಕ್ಕಾಗಲಿ ಅಥವಾ ಸಿಮೆಂಟ್ ರಸ್ತೆ ನಿರ್ವಿುಸುವುದಕ್ಕೂ ರಕ್ಷಣಾ ಇಲಾಖೆಯವರು ಅನುಮತಿ ನೀಡುತ್ತಿಲ್ಲ.
ಹೀಗಾಗಿ, ಈ ಜಾಗವನ್ನು ಮಹಾನಗರ ಪಾಲಿಕೆ ಅಥವಾ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿ, ಧಾರವಾಡ ಬಳಿಯ ಮುಮ್ಮಿಗಟ್ಟಿ ಹೊರವಲಯದ 25 ಎಕರೆ ಜಾಗವನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಕಳೆದ ಕೆಲ ದಿನಗಳಿಂದ ಮಾತುಕತೆ ನಡೆದಿತ್ತು.
ಆದರೆ, ಗುರುವಾರ ನಡೆದ ಸಭೆಯಲ್ಲಿ ಧಾರವಾಡ ಬಳಿಯ ಜಾಗ ಪಡೆದುಕೊಳ್ಳಲು ಆಸಕ್ತಿ ತೋರದ ಹಿರಿಯ ಸೇನಾಧಿಕಾರಿ ದಿವ್ಯಾ ಅವರು, ವಿಶ್ವೇಶ್ವರ ನಗರದಲ್ಲಿರುವ ಜಾಗದ ಬದಲಾಗಿ ಬೆಂಗಳೂರಿನಲ್ಲಿ ಪ್ರತ್ಯೇಕ ನೀಡುವಂತೆ ಕೋರಿದರು.
ವಿಶ್ವೇಶ್ವರ ನಗರದಲ್ಲಿರುವ ರಕ್ಷಣಾ ಇಲಾಖೆಯ ಜಾಗದಲ್ಲಿ ಸೈನ್ಯಕ್ಕೆ ಸಂಬಂಧಿಸಿದ ಮ್ಯೂಸಿಯಂ ನಿರ್ವಿುಸಿದರೆ ಯುವಕರಿಗೆ ಸೇನಾಪಡೆ ಸೇರಲು ಸ್ಪೂರ್ತಿ ದೊರೆಯುತ್ತದೆ. ಜಾಗವೂ ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿ ಇರುತ್ತದೆ. ನಿರ್ವಹಣೆ ಮಾತ್ರ ಸ್ಥಳೀಯ ಸಂಸ್ಥೆ ಮಾಡುವ ವಿಷಯದ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.