(murder) ಚಾಕುವಿನಿಂದ ಇರಿದು ಪತ್ನಿ ಕೊಲೆ

ಪತಿಯೇ ಪತ್ನಿಯನ್ನು ಹತ್ಯೆ (murder) ಮಾಡಿ ಕೇಶ್ವಾಪುರ ಪೊಲೀಸ್ ಠಾಣೆಗೆ ಶರಣಾದ ಘಟನೆ
ಪತಿಯೇ ಪತ್ನಿಯನ್ನು ಹತ್ಯೆ (murder) ಮಾಡಿ ಕೇಶ್ವಾಪುರ ಪೊಲೀಸ್ ಠಾಣೆಗೆ ಶರಣಾದ ಘಟನೆ
Published on
ಹುಬ್ಬಳ್ಳಿ: ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಉಂಟಾದ ಕಲಹದಲ್ಲಿ ಪತಿಯೇ ಪತ್ನಿಯನ್ನು ಹತ್ಯೆ (murder) ಮಾಡಿ ಇಲ್ಲಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ಶರಣಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಲಿಂಗೇಶ್ವರ ನಗರದಲ್ಲಿ ತೈಸಿನ್ ಶಿಗ್ಗಾಂವಿ(26) ಕೊಲೆಯಾಗಿದ್ದಾಳೆ. ಪತಿ ಇರ್ಫಾನ್ (33) ಸಾಲ ಮಾಡಿದ್ದ.
ದುಡಿದು ಸಾಲ ಮುಟ್ಟಿಸುವಂತೆ ಪತ್ನಿ ಮಾಸಾಬಿ ನಿತ್ಯ ಗಂಡನಿಗೆ ಕಿರುಕುಳ ನೀಡುತ್ತಿದ್ದಳು. ಇದರಿಂದ ಕುಪಿತಗೊಂಡ ಇರ್ಫಾನ್, ಮಾಸಾಬಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ನಂತರ ತಲೆಮರೆಸಿಕೊಂಡಿದ್ದ ಇರ್ಫಾನ್, ತನ್ನ ಮಗುವಿನೊಂದಿಗೆ ಬಂದು ಕೇಶ್ವಾಪುರ ಠಾಣೆಯಲ್ಲಿ ಶರಣಾಗಿದ್ದಾನೆ. ಸ್ಥಳಕ್ಕೆ ಡಿಸಿಪಿ ಮಹಾನಿಂಗ ನಂದಗಾಂವಿ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net