ದಾದಾಪೀರ ಕೋಲಕಾರ (35) ಹತ್ಯೆಯಾದ ವ್ಯಕ್ತಿ. ಅಜೀಮ್ ರೆವಡಿಹಾಳದಲ್ಲಿರುವ ಮಾವನ ಮನೆಗೆ ಕೆಲಸದ ವಿಚಾರಕ್ಕೆ ಹೋಗಿದ್ದಾನೆ. ಆಗ ಮೊಬೈಲ್ ಫೋನ್ ಚಾರ್ಜ್ ಹಾಕುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಹಣಕಾಸಿನ ವಿಚಾರ ಮುನ್ನೆಲೆಗೆ ಬಂದಿದೆ. ಆಗ ಜಗಳ ವಿಕೋಪಕ್ಕೆ ಹೋಗಿದ್ದು, ಕುಡಿತ ಮತ್ತಿನಲ್ಲಿದ್ದ ಅಳಿಯ ಅಜೀಮ್ ಜಮಖಾನೆ, ಮಾವ ದಾದಾಪೀರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.