murder 500 ರೂ. ಸಾಲದ ಹಣ ಕೊಡದ್ದಕ್ಕೆ ಕೊಲೆ

murder ಹಣದ ವಿಚಾರವಾಗಿ ಆಟೋಚಾಲಕನೊಬ್ಬನ ಕೊಲೆ
murder ಹಣದ ವಿಚಾರವಾಗಿ ಆಟೋಚಾಲಕನೊಬ್ಬನ ಕೊಲೆ
Published on
ಹುಬ್ಬಳ್ಳಿ: ಕೇವಲ 500 ರೂ. ಸಾಲದ ಹಣದ ವಿಚಾರವಾಗಿ ಆಟೋಚಾಲಕನೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಲೆ murder ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿಯ ಯಲ್ಲಾಪೂರ ಓಣಿಯ ನಿವಾಸಿ, ಆಟೋ ಚಾಲಕ ಈರಣ್ಣ ಹುರಕಡ್ಲಿ (45) ಕೊಲೆಯಾದ ವ್ಯಕ್ತಿ. ಈರಣ್ಣ, ಶಶಿಧರ ಎಂಬಾತನಿಂದ 500 ರೂ. ಸಾಲ ಪಡೆದಿದ್ದರು. ಜೂ. 25ರಂದು ಹಣದ ವಿಚಾರವಾಗಿ ಇಬ್ಬರ ನಡುವೆ ತೀವ್ರ ಜಗಳವಾಗಿದ್ದು, ಕುಪಿತಗೊಂಡ ಶಶಿಧರ ಕಲ್ಲಿನಿಂದ ಈರಣ್ಣ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಈರಣ್ಣನನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಶಿಧರನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net