(mruder) ರಸ್ತೆ ಬದಿ ಶವವಿದ್ದ ಚೀಲ ಪತ್ತೆ

ಶವವಿದ್ದ ಚೀಲ (murder) ಪತ್ತೆ
ಶವವಿದ್ದ ಚೀಲ (murder) ಪತ್ತೆ
Published on
ಹುಬ್ಬಳ್ಳಿ: ನಗರ ಹೊರವಲಯದ ಗದಗ ರಾಷ್ಟ್ರೀಯ ಹೆದ್ದಾರಿಯ ಐಟಿಸಿ ಗೋದಾಮು ಪಕ್ಕದಲ್ಲಿ ಶವವಿದ್ದ ಚೀಲ (murder) ಪತ್ತೆಯಾಗಿದೆ.
ಬಂಡಿವಾಡ ಮೂಲದ ಮಂಜುನಾಥ (29) ಶವ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಂತಕರು ಯುವಕನನ್ನು ಬೇರೆಡೆ ಕೊಲೆ ಮಾಡಿ, ಕುರುಹು ಸಿಗದಂತೆ ಶವವನ್ನು ಚೀಲದಲ್ಲಿ ಹಾಕಿ ಕಟ್ಟಿ ಹೆದ್ದಾರಿ ಮೇಲೆ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಬುಧವಾರ ಬೆಳಗ್ಗೆ ರಸ್ತೆಯಲ್ಲಿ ಹೋಗುತ್ತಿದ್ದವರು ಈ ಚೀಲ ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದಾಗ ವಿಷಯ ಬಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶವದ ಮರಣೋತ್ತರ ಪರೀಕ್ಷೆಗಾಗಿ ಕೆಎಂಸಿಆರ್‌ಐಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸತು ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net