ಸಿಸಿ ಕ್ಯಾಮೆರಾ ದುರಸ್ಥಿಗೆ ಪಾಲಿಕೆ ನಿರ್ಲಕ್ಷ್ಯ camera

camera ಹುಬ್ಬಳ್ಳಿಯ ವಿಜಯ ನಗರ ಬಡಾವಣೆಯಲ್ಲಿನ ಸಿಸಿ ಕ್ಯಾಮೆರಾ.
camera ಹುಬ್ಬಳ್ಳಿಯ ವಿಜಯ ನಗರ ಬಡಾವಣೆಯಲ್ಲಿನ ಸಿಸಿ ಕ್ಯಾಮೆರಾ.
Published on

ಪ್ರಮುಖ ಮುಖ್ಯಾಂಶಗಳು

  • ಮಯೂರಿ, ವಿಜಯ ನಗರ ಬಡಾವಣೆ ನಾಗರಿಕರಲ್ಲಿ ಆತಂಕ
  • ಪಾಲಿಕೆಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.
  • ಕಂಬಗಳ ಮೇಲೆ ಗೊಂಬೆಯಂತೆ ನೇತಾಡುತ್ತಿವೆ
ಹುಬ್ಬಳ್ಳಿ
ಕಳ್ಳರ ಕಾಟ ತಡೆಯಲು, ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ, ಮಹಾನಗರ ಪಾಲಿಕೆಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.
6 ತಿಂಗಳ ಹಿಂದೆ ಕ್ಯಾಮೆರಾಗಳನ್ನು ಅಳವಡಿಸಿದ್ದಾಗ ಇನ್ನಾದರೂ ಕಳ್ಳರ ಕಾಟ ತಪ್ಪಬಹುದು, ಸುರಕ್ಷಿತವಾಗಿ ಬದುಕಬಹುದೆಂಬ ಆಶಯ ಬಡಾವಣೆಗಳ ಜನರಲ್ಲಿ ಮೂಡಿತ್ತು.
ಆದರೆ, ಸಿಸಿ ಕ್ಯಾಮೆರಾಗಳು ತಾಂತ್ರಿಕ ಅಥವಾ ನಿರ್ವಹಣೆ ಸಮಸ್ಯೆಯಿಂದಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಕಳೆದ 6 ತಿಂಗಳಿಂದ ಕಂಬಗಳ ಮೇಲೆ ಗೊಂಬೆಯಂತೆ ನೇತಾಡುತ್ತಿವೆಯೇ ಹೊರತು, ಯಾವುದೇ ದೃಶ್ಯ ಸಂಗ್ರಹಿಸುತ್ತಿಲ್ಲ.
ಸಿಸಿ ಕ್ಯಾಮೆರಾ ಸ್ಥಗಿತಗೊಂಡಿರುವ ಮಾಹಿತಿ ಬಡಾವಣೆಯಲ್ಲಿ ಓಡಾಡುವ ಕಿಡಿಗೇಡಿಗಳ ಗಮನಕ್ಕೂ ಬಂದಿದ್ದು, ರಾತ್ರಿ ವೇಳೆಯಲ್ಲಿ ಅಪರಿಚಿತರ ಓಡಾಟ ಹೆಚ್ಚಾಗಿದೆ.
ನಿವಾಸಿಗಳು ಕಳ್ಳರ ಹಾವಳಿಯ ಆತಂಕದಲ್ಲಿ ಸಮಯ ಕಳೆಯುವಂತಾಗಿದೆ ಎಂದು ಪ್ರಮುಖ ನಾಗರಿಕರಾದ ಸುರೇಶ ಕಿರೇಸೂರ, ವಿ.ಎಂ. ಚಿಕ್ಕಮಠ ಇನ್ನಿತರರು ಕಳೆದ ಫೆಬ್ರುವರಿಯಲ್ಲಿಯೇ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆದರೂ, ಇದುವರೆಗೆ ಸಿಸಿ ಕ್ಯಾಮೆರಾಗಳು ದುರಸ್ತಿಗೊಂಡಿಲ್ಲ. ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ತಕ್ಷಣ ಸಿಸಿ ಕ್ಯಾಮೆರಾಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸುರೇಶ ಕಿರೇಸೂರ ಹಾಗೂ ಇತರರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net