ನಗರದಲ್ಲಿ ಈಗಾಗಲೇ ಕೆಲ ಪೆಟ್ರೋಲ್ ಬಂಕ್ಗಳಿಗೆ ಇಂಧನ ಪೂರೈಕೆಯಾಗದ ಹಿನ್ನೆಲೆ ಬಂದ್ ಮಾಡಲಾಗಿದೆ. ಇಂಧನ ಇರುವ ಬಂಕ್ಗಳ ಎದುರು ಜಮಾಯಿಸಿದ ವಾಹನ ಸವಾರರು, ಇಂಧನ ಟ್ಯಾಂಕ್ ಭತಿರ್ ಮಾಡಿಸುತ್ತಿರುವುದು ಕಂಡುಬಂತು. ಸಂಜೆ 7 ಗಂಟೆಯ ನಂತರ ಬಂಕ್ಗಳ ಮುಂದೆ ವಾಹನಗಳ ಸರದಿ ಸಾಲು ಕಂಡುಬಂದಿತು. ಮತ್ತೆ ಕೆಲವರು ಬಾಟಲಿಗಳ ಮೂಲಕ ಪೆಟ್ರೋಲ್ ತೆಗೆದುಕೊಂಡು ಹೋಗಿ ಶೇಖರಿಸಿ ಇಟ್ಟುಕೊಂಡರು. ನಗರ ಪ್ರದೇಶ ಸೆರಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರುವ ಪೆಟ್ರೋಲ್ ಬಂಕ್ಗಳಲ್ಲೂ ವಾಹನ ದಟ್ಟಣೆ ಕಾಣಿಸಿತು.