Moot court ಹಕ್ಕು ವಂಚಿತರ ರಕ್ಷಣೆಗೆ ಬರುವ ಸಂವಿಧಾನ

Moot court ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ನ್ಯಾಯಮೂರ್ತಿ ಎಸ್​. ಸುನಿಲ ದತ್​ ಯಾದವ್​ ಉದ್ಘಾಟಿಸಿದರು. ಡಾ. ಸಿ. ಬಸವರಾಜು, ಡಾ. ರತ್ನಾ ಭರಮಗೌಡರ, ಗೀತಾ ಕೌಲಗಿ ಇತರರು ಇದ್ದರು.
Moot court ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ನ್ಯಾಯಮೂರ್ತಿ ಎಸ್​. ಸುನಿಲ ದತ್​ ಯಾದವ್​ ಉದ್ಘಾಟಿಸಿದರು. ಡಾ. ಸಿ. ಬಸವರಾಜು, ಡಾ. ರತ್ನಾ ಭರಮಗೌಡರ, ಗೀತಾ ಕೌಲಗಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಮೂರ್ತಿ ಎಸ್​. ಸುನಿಲ ದತ್​ ಯಾದವ್​ ಹೇಳಿಕೆ
  • ಕಾನೂನು ವಿವಿಯಲ್ಲಿ ಕಲ್ಪಿತ ನ್ಯಾಯಾಲಯ ಸ್ಪರ್ಧೆ
ಹುಬ್ಬಳ್ಳಿ: Moot court ಸಂವಿಧಾನವು ಕೇವಲ ಕಾಯಿದೆ ಇರುವ ಪುಸ್ತಕವಲ್ಲ, ಧ್ವನಿ ಇಲ್ಲದವರ ಮತ್ತು ಮೂಲಭೂತ ಹಕ್ಕುಗಳ ವಂಚಿತರನ್ನು ರಕ್ಷಿಸುವ ಮಹಾನ್​ ಗ್ರಂಥವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್​. ಸುನಿಲ ದತ್​ ಯಾದವ್​ ಹೇಳಿದರು.
ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 12ನೇ ರಾಜ್ಯ ಮಟ್ಟದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆ ಸಮಯದ ಸಮಸ್ಯೆಗಳು, ಅನರ್ಹರನ್ನು ಪಟ್ಟಿಯಿಂದ ತೆಗೆದು ಹಾಕುವುದು ಹಾಗೂ ತಾಂತ್ರಿಕ ದೋಷಗಳಿಂದ ಉಂಟಾಗುವ ತೊಂದರೆ ಬಗೆ ಹರಿಸಲು ನಿಖರವಾದ ವಿಶೇಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಷ್ಟು ಅಗತ್ಯ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದರು.
ಹಿರಿಯ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಓದುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಸಂವಹನ ಕಲೆ, ನಿರಂತರ ಕಲಿಕೆ ಮತ್ತು ನ್ಯಾಯದ ಪರ ಅಚಲವಾದ ಬದ್ಧತೆ, ಸಮಯ ಪ್ರಜ್ಞೆ ಹಾಗೂ ವೃತ್ತಿಪರತೆಯಿಂದ ವರ್ತಿಸಬೇಕು ಎಂದು ಹೇಳಿದರು.
ನ್ಯಾಯಾಲಯದಲ್ಲಿ ನಡೆಯುವ ಕಾರ್ಯ ಕಲಾಪಗಳು ತನ್ನ ಕದಾರರಿಗೆ ಅರ್ಥವಾಗುವ ಸ್ಥಳಿಯ ಭಾಷೆಯಲ್ಲಿ ವಾದ ಮಂಡಿಸಿದಾಗ ಮಾತ್ರ ಕದಾರರು ತನ್ನ ಪ್ರಕರಣದ ಆಗು ಹೋಗುಗಳನ್ನು ತಿಳಿಯಬಲ್ಲನು ಎಂದರು.
ಕುಲಸಚಿವೆ ಗೀತಾ ಕೌಲಗಿ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ ಉಪಸ್ಥಿತರಿದ್ದರು.
ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಸಹಾಯಕ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಡಿ, ಡಾ. ಭೀಮಾಬಾಯಿ ಮೂಲಗೆ ಮತ್ತು ಡಾ. ಗಿರೀಶ ಕೆ.ಸಿ ಹಾಗೂ ಸಹಾಯಕ ಸಂಯೋಜಕಿ ಡಾ. ಪಾರ್ವತಿ ಎಂ.ಕೆ., ಮಹಾದೇವಿ ಕುಸುಗಲ್​ ಅವರು ಸಂಯೋಜಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net