Bright school ಬ್ರೈಟ್ ಬಿ ಸ್ಕೂಲ್ನಲ್ಲಿ ಮೊನೆಟ್ರಿಕ್ಸ್ ಉತ್ಸವ
Bright school ಹುಬ್ಬಳ್ಳಿಯ ಬ್ರೈಟ್ ಬಿಜಿನೆಸ್ ಸ್ಕೂಲ್ನಲ್ಲಿ ಏರ್ಪಡಿಸಿದ್ದ "ಮೊನೆಟ್ರಿಕ್ಸ್ 2ಕೆ25' ಸ್ಪರ್ಧೆಯಲ್ಲಿ ಜನರಲ್ ಚಾಂಪಿಯನ್ಶಿಪ್ ಪಡೆದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ತಂಡಕ್ಕೆ ಟ್ರೋಫಿ ನೀಡಲಾಯಿತು. ಜಿತೇಂದ್ರ ನಾಯಕ್, ಡಾ. ಪ್ರಸಾದ್ ರೂಡಗಿ, ಬಸವರಾಜ ಲಿಂಗಶೆಟ್ಟರ್, ಪ್ರೊ. ದೀಪಕ ಇದ್ದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ತಂಡ ಜನರಲ್ ಚಾಂಪಿಯನ್
ಹಣಕಾಸಿನ ವಿಷಯಗಳ ಕುರಿತು ನಾಲ್ಕು ಒಳನೋಟ ಉಳ್ಳ ಪ್ರಸ್ತುತಿಗಳು, ಉಪನ್ಯಾಸ ಮತ್ತು ಸಹಯೋಗದ ಕಲಿಕೆ ಮುಂತಾದವುಗಳು ಕಾರ್ಯಕ್ರಮದ ವಿಶೇಷವಾಗಿದ್ದವು.
ಅತಿಥಿಯಾಗಿದ್ದ ಪ್ರಮುಖ ವಾಸ್ತುಶಿಲ್ಪಿ ಆರ್. ಜಿತೇಂದ್ರ ನಾಯಕ್ ಮಾತನಾಡಿ, ಯಶಸ್ವಿ ವೃತ್ತೀಜಿವನಕ್ಕಾಗಿ ವಿದ್ಯಾರ್ಥಿಗಳಾಗಿದ್ದಾಗಲೇ ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಸರಿಯಾದ ಪ್ರಯತ್ನಗಳೊಂದಿಗೆ ದೃಢ ಮನಸ್ಸು ಇದ್ದರೆ ಆರ್ಥಿಕವಾಗಿ ಸಾಕ್ಷರರಾಗುವುದು ಸುಲಭ ಎಂದರು.
ಅನುಭವದ ಕಲಿಕೆಯ ಜತೆಗೆ ಎಂಬಿಎ ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಾಕ್ಷರತೆ ಬೆಳೆಸುತ್ತಿರುವ ಬ್ರೈಟ್ ಬಿಜಿನೆಸ್ ಸ್ಕೂಲ್ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಬಿಎಸ್ ನಿರ್ದೇಶಕ ಡಾ. ಪ್ರಸಾದ್ ಬಿ. ರೂಡಗಿ ಮಾತನಾಡಿ, ಸೋಲು- ಗೆಲುವು ಸ್ಪರ್ಧೆಯ ಒಂದು ಭಾಗ. ಪ್ರಶಸ್ತಿಗಳು ಕಾರ್ಯಕ್ಷಮತೆ ಮತ್ತು ಸಾಮರ್ಥ್ಯದ ಸೂಚಕಗಳಾಗಿವೆ ಎಂದರು.
ಕ್ರೀಡಾಕೂಟದಲ್ಲಿ ಕರ್ನಾಟಕದ ವಿವಿಧ ಶೈಕ್ಷಣಿಕ ಸಂಸ್ಥೆಗಳಿಂದ 15 ಎಂಬಿಎ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ತಂಡವು ಜನರಲ್ ಚಾಂಪಿಯನ್ ಟ್ರೋಫಿ ಪಡೆದುಕೊಂಡಿತು. ಧಾರವಾಡದ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು ಮತ್ತು ತಾಂತ್ರಿಕ ಕಾಲೇಜು ರನ್ನರ್ ಅಪ್ ಪಡೆಯಿತು.
ಬ್ರೈಟ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಬಸವರಾಜ ಲಿಂಗಶೆಟ್ಟರ್, ಕಾರ್ಯಕ್ರಮ ಸಂಯೋಜಕ ಪ್ರೊ. ದೀಪಕ್ ಎನ್, ಅಧ್ಯಾಪಕರು ಪಾಲ್ಗೊಂಡಿದ್ದರು.
ಇವೆಂಟ್ ವಿಜೇತರು ಮತ್ತು ರನ್ನರ್ -ಅಪ್ಗಳು ಕೆಳಗಿನಂತಿವೆ:
ಫಿಂಗರ್ಡಿಯನ್ಸ್- ಕೆಎಲ್ಇ ಟೆಕ್ ವಿಶ್ವವಿದ್ಯಾಲಯ ಪ್ರಥಮ, ರನ್ನರ್ -ಅಪ್ ಎಸ್ಡಿಎಂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು.
ಆಲ್ಫಾ ಎಡ್ಜ್: ಕೆಎಲ್ಇ ಟೆಕ್ ವಿವಿ ವಿಜೇತರು, ರನ್ನರ್-ಅಪ್ ಎಸ್ಡಿಎಂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು.