ಸಂಚಾರಿ ಆರೋಗ್ಯ ಸೇವೆ 28ಕ್ಕೆ ಲೋಕಾರ್ಪಣೆ health

health ಮೊಬೈಲ್ ಡೈಗ್ನೋಸ್ಟಿಕ್ ವಾಹನ ಕುರಿತು ರೋಟರಿ ಡಿಸ್ಟ್ರಿಕ್ ಗರ್ವನರ್​ನ ಮೆಂಟರ್ ಡಾ. ಎನ್.ಎ. ಚರಂತಿಮಠ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
health ಮೊಬೈಲ್ ಡೈಗ್ನೋಸ್ಟಿಕ್ ವಾಹನ ಕುರಿತು ರೋಟರಿ ಡಿಸ್ಟ್ರಿಕ್ ಗರ್ವನರ್​ನ ಮೆಂಟರ್ ಡಾ. ಎನ್.ಎ. ಚರಂತಿಮಠ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮನೆ ಬಾಗಿಲಿಗೆ ಆರೋಗ್ಯ ತಪಾಸಣೆ
  • 50 ಹಳ್ಳಿಗಳಲ್ಲಿ ಸಂಚಾರ
  • ಉಚಿತ ವೈದ್ಯಕೀಯ ತಪಾಸಣೆ
ಹುಬ್ಬಳ್ಳಿ :
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ರೋಟರಿ ಡಿಸ್ಟ್ರಿಕ್ ಗರ್ವನರ್​ನ ಮೆಂಟರ್ ಡಾ. ಎನ್.ಎ. ಚರಂತಿಮಠ, ಸುಸಜ್ಜಿತ ವೈದ್ಯಕೀಯ ಸಲಕರಣೆಗಳುಳ್ಳ 65 ಲಕ್ಷ ರೂ. ಮೌಲ್ಯದ ಈ ಮೊಬೈಲ್ ಡೈಗ್ನೋಸ್ಟಿಕ್ ಆಂಬುಲೆನ್ಸ್ ವಿವಿಧ ಗ್ರಾಮಗಳಿಗೆ ತೆರಳಿ, ಅಲ್ಲಿನ ಜನರ ಉಚಿತ ವೈದ್ಯಕೀಯ ತಪಾಸಣೆ, ರಕ್ತ ಪರೀಕ್ಷೆ, ಎಕ್ಸ್ ರೇ, ಇಸಿಜಿ, ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರ ಆರೋಗ್ಯ ತಪಾಸಣೆ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಹುಬ್ಬಳ್ಳಿ ತಾಲೂಕಿನ 50 ಹಳ್ಳಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಈ ವಾಹನದಲ್ಲಿ ಎನ್​ಎಂಆರ್ ಸಂಸ್ಥೆಯಿಂದ 15 ಲಕ್ಷ ರೂ. ಮೌಲ್ಯದ ಎಕ್ಸ್ ರೇ ಮತ್ತು ಇತರ ಪರೀಕ್ಷಾ ವಿಧಾನಗಳನ್ನು ಸಹ ಪೂರೈಸಲಾಗಿದೆ.
ಹೆಲ್ತ್ ಆನ್ ವ್ಹೀಲ್ಸ್ ಸಂಚಾರಿ ಆರೋಗ್ಯ ಸೇವೆಯ ಆಂಬುಲೆನ್ಸ್​ನ ಲೋಕಾರ್ಪಣೆ ಸಮಾರಂಭ 28ರಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ದೇಶಪಾಂಡೆ ನಗರದ ಗುಜರಾತ ಭವನ ಎದುರಿನ ಕರ್ನಾಟಕ ಜಿಮಖಾನಾ ಮೈದಾನದಲ್ಲಿ ಆಯೋಜಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಅರುಣ ಭಂಡಾರಿ, ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಹಾಗೂ ಗಣೇಶ ಭಟ್ ಅತಿಥಿಗಳಾಗಿ ಪಾಲ್ಗೊಳ್ಳುವರು. ರೋಟರಿ ಸಹಾಯಕ ಗವರ್ನರ್ ಕೌಸ್ತುಭ ಸಂಶಿಕರ, ಮಡಿವಾಳಪ್ಪ ಜುಂಜುನ್ನವರ, ಇನ್ನಿತರರು ಪಾಲ್ಗೊಳ್ಳುವರು.
ಎನ್​ಎಂಆರ್ ಫೌಂಡೇಷನ್​ನ ಚೇರ್ಮನ್ ಡಾ. ರವೀಂದ್ರ ಕಲಘಟಗಿ ಮಾತನಾಡಿ, ಬಡ ರೋಗಿಗಳ ಅನುಕೂಲಕ್ಕಾಗಿ ಕೆಲವು ವೈದ್ಯಕೀಯ ರಿಯಾಯಿತಿ ನೀಡುವ ಉದ್ದೇಶದಿಂದ ಫೌಂಡೇಷನ್ (ಟ್ರಸ್ಟ್) ಸ್ಥಾಪಿಸಲಾಗಿದೆ.
36 ವರ್ಷಗಳ ಅವಿರತ ಉತ್ತಮ ದರ್ಜೆಯ ಸೇವೆ ಪರಿಗಣಿಸಿ ರೋಟರಿ ಕ್ಲಬ್ ಹುಬ್ಬಳ್ಳಿ ಹಾಗೂ ರೋಟರಿ ಕ್ಲಬ್ ವಿದ್ಯಾನಗರದ ವತಿಯಿಂದ ಹೆಲ್ತ್ ಆನ್ ವ್ಹೀಲ್ ಎಂಬ ಸುಸಜ್ಜಿತ ವೈದ್ಯಕೀಯ ಸಲಕರಣೆಗಳ ಆಂಬುಲೆನ್ಸ್ ನೀಡಿದ್ದಾರೆ ಎಂದು ತಿಳಿಸಿದರು.
ವಿದ್ಯಾನಗರ ರೋಟರಿ ಕ್ಲಬ್​ನ ಡಾ. ಮಹಿಮಾ ದಂಡ ಮಾತನಾಡಿ, ಈ ಸಂಚಾರಿ ಆರೋಗ್ಯ ಸೇವೆಯನ್ನು ಪಡೆಯಲು ಇಚ್ಛಿಸುವವರಿಗಾಗಿ ಹೆಲ್ಪ್ ಲೈನ್ ಸಹ ಆರಂಭಿಸಲಾಗಿದೆ ಎಂದು ಹೇಳಿದರು.
ರೋಟರಿ ಕ್ಲಬ್ ವಿದ್ಯಾನಗರದ ಅಧ್ಯಕ್ಷ ಪ್ರವೀಣ ಜೈನ್, ರೋಟರಿ ಕ್ಲಬ್ ಹುಬ್ಬಳ್ಳಿ ಅಧ್ಯಕ್ಷ ಕಿರಣ ಹೆಬಸೂರ, ಡಾ. ಸುಹಾಸ ಕಲಘಟಗಿ, ಸಂಜೀವ ಶೆಟ್ಟಿ, ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net