mlc work ಹುಬ್ಬಳ್ಳಿಯ ನೇಕಾರನಗರ ಛಬ್ಬಿ ಪ್ಲಾಟ್ನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಚಾಲನೆ ನೀಡಿದರು. ಮೇಯರ್ ದುರ್ಗಮ್ಮ ಬೆಜವಾಡ, ಪಾಲಿಕೆ ಸದಸ್ಯೆ ಶಾಂತಾ ಹಿರೇಮಠ, ಮುಖಂಡರಾದ ಶಿವಯ್ಯ ಹಿರೇಮಠ, ವಿಶಾಲ ಪೂಜಾರ, ಇತರರು ಇದ್ದರು.
ಹುಬ್ಬಳ್ಳಿ:mlc work ಧಾರವಾಡ ಜಿಲ್ಲೆ ಮತ್ತು ಪೂರ್ವ ವಿಧಾನಸಭಾ ಕ್ಷೇತ್ರವನ್ನು ನೋಡಲ್ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಹೇಳಿದರು.
ಇಲ್ಲಿಯ ವಾರ್ಡ್ ಸಂಖ್ಯೆ 80ರ ನೇಕಾರನಗರ ಛಬ್ಬಿ ಪ್ಲಾಟ್ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿಶೇಷ ಕಾಳಜಿಯಿಂದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯ ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ 13 ವರ್ಷಗಳಿಂದ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ ಎಂಬ ಕೊರಗು ಈ ಭಾಗದ ಅನೇಕ ಜನರಲ್ಲಿದೆ. ಇಲ್ಲಿನ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ತಂದು ಜನರ ಅಭ್ಯುದಯಕ್ಕೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ನೇಕಾರನಗರದ ಛಬ್ಬಿ ಪ್ಲಾಟ್, ಶಿವನಾಗ ಬಡಾವಣೆ ಹಾಗೂ ಚೌಹಾಣ ಪ್ಲಾಟ್ಗಳಲ್ಲಿ ಬಹುದಿನಗಳ ನಿರೀಕ್ಷಿತ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಈ ಭಾಗದ ಸಮಸ್ಯೆಗಳು ಮತ್ತು ಜನರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಜನರ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಸಹ ಕಾಮಗಾರಿ ಬಗ್ಗೆ ನಿಗಾ ವಹಿಸಬೇಕು. ಒಂದು ವೇಳೆ ಕಳಪೆ ಕಾಮಗಾರಿ ಕಂಡುಬಂದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮೇಯರ್ ದುರ್ಗಮ್ಮ ಬೆಜವಾಡ, ಪಾಲಿಕೆ ಸದಸ್ಯೆ ಶಾಂತಾ ಹಿರೇಮಠ, ಬಿಜೆಪಿ ಮುಖಂಡರಾದ ಶಿವಯ್ಯ ಹಿರೇಮಠ, ಅಂಬಿಗೇರ, ಬಸವನಗೌಡ ಚಮಪಾನಗೌಡ್ರ, ವಿಶಾಲ ಪೂಜಾರ, ಜ್ಞಾನಿಶ್ವರ ರಾಶಿನಕರ, ಹರೀಶ ಗುಡಿ, ಗುರುಹಿರಿಯರು, ಮಾತೆಯರು ಹಾಗೂ ಯುವಕರು ಇದ್ದರು.