ಕಿಡಿಗೇಡಿಗಳಿಂದ ಬೀರಲಿಂಗೇಶ್ವರ ದೇವರ ಮೂರ್ತಿ ಭಗ್ನ

ಭಗ್ನಗೊಂಡ ಬೀರಲಿಂಗೇಶ್ವರ ದೇವರ ಮೂರ್ತಿ.
ಭಗ್ನಗೊಂಡ ಬೀರಲಿಂಗೇಶ್ವರ ದೇವರ ಮೂರ್ತಿ.
Published on
ಧಾರವಾಡ: ಬೀರಲಿಂಗೇಶ್ವರ ದೇವರ ಮೂರ್ತಿನ್ನು ಕಿಡಗೇಡಿಗಳು ಒಡೆದು ಹಾಕಿದ ಘಟನೆ ತಾಲೂಕಿನ ಅಂಬ್ಲಿಕೊಪ್ಪ ಗ್ರಾಮದಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಗ್ರಾಮದ ಕುರುಬ ಸಮಾಜದವರು ಕಳೆದ 13 ವರ್ಷದ ಹಿಂದೆ ಗ್ರಾಮ ಪಂಚಾಯಿತಿ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪಣೆ ಮಾಡಿದ್ದರು. ನಂತರ ಜಾಗದ ವಿವಾದ ನ್ಯಾಯಾಲಯ​ ಮೆಟ್ಟಿಲೇರಿತ್ತು. ಹೀಗಾಗಿ ಕೆಲವರು ಮೂರ್ತಿ ಪೂಜೆ ಮಾಡಿಕೊಂಡು ಬಂದಿದ್ದರು. ಭಾನುವಾರ ರಾತ್ರಿ ಮೂರ್ತಿನ್ನು ಕಿಡಗೇಡಿಗಳು ಜಖಂಗೊಳಿಸಿದ್ದಾರೆ.
ಸೋಮವಾರ ಈ ಟನೆ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಧಾರವಾಡ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು ಎಂದು ಕುರುಬ ಸಮಾದವರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net