ಗಣೇಶ ದರ್ಶನ ಪಡೆದ ಸಚಿವ ಜೋಶಿ lord

lord ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಪೆಂಡಾಲ್​ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಜನಾ ಮಂಡಳಿಯೊಂದಿಗೆ ಪಾಲ್ಗೊಂಡಿದ್ದರು.
lord ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಪೆಂಡಾಲ್​ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಜನಾ ಮಂಡಳಿಯೊಂದಿಗೆ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶೋತ್ಸವ ಸಂಭ್ರಮ
  • ಪತಂಜಲಿ ಯೋಗ ಶಿಕ್ಷಣ ವತಿಯಿಂದ ಯೋಗ ನಮಸ್ಕಾರ ಜರುಗಿತು
  • ಸತತ 5 ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.
ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆದ ಗಣೇಶೋತ್ಸವದ ಧಾರ್ವಿುಕ ಉತ್ಸವದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರು ಭಜನಾ ತಂಡದೊಂದಿಗೆ ಜತೆಗೂಡಿ ತಾಳ ಬಾರಿಸುತ್ತ್ತ ‘ಗಣಪತಿ ಬಪ್ಪಾ ಮೋರಯಾ’ ಜಯಘೊಷದೊಂದಿಗೆ ನೃತ್ಯ ಮಾಡಿದರು.
ಮೈದಾನದಲ್ಲಿ ಮೊಳಗಿದ ತಾಳ-ಮೇಳಗಳ ನಾದಕ್ಕೆ ಇಡೀ ಪರಿಸರವೇ ಭಕ್ತಿ ಸಾಗರದಲ್ಲಿ ಮುಳುಗಿತ್ತು. ಸಾರ್ವಜನಿಕರು ಸರದಿಯಲ್ಲಿ ನಿಂತು ಶ್ರೀಗಣೇಶ ಮೂರ್ತಿಯ ದರ್ಶನ ಪಡೆದರು. ಭಕ್ತರಿಗಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಂಗಳವಾರ ಬೆಳಗ್ಗೆ ಪತಂಜಲಿ ಯೋಗ ಶಿಕ್ಷಣ ವತಿಯಿಂದ ಯೋಗ ನಮಸ್ಕಾರ ಜರುಗಿತು. ನಂತರ ಗಣಹೋಮ, ಸತ್ಯ ನಾರಾಯಣ ಪೂಜೆ, ಸುಜಯ ಶಾನಭಾಗ ಅವರಿಂದ ನೃತ್ಯರೂಪಕ, 150 ಮಕ್ಕಳಿಂದ ವಂದೇ ಮಾತರಂ ಗೀತೆ, ಗೋಂದಳಿ ಕಾರ್ಯಕ್ರಮ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಘೋಷ್ (ಬ್ಯಾಂಡ್) ತಂಡದಿಂದ ಗಣೇಶ ವಂದನ ನಡೆಯಿತು.
ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯರಾದ ಲಿಂಗರಾಜ ಪಾಟೀಲ, ಎಸ್. ವಿ. ಸಂಕನೂರು, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಪ್ರಮುಖರಾದ ಜಯತೀರ್ಥ ಕಟ್ಟಿ, ಸಂಜೀವ ಬಡಸ್ಕರ, ರಘು ಅಕಮಂಚಿ, ಇನ್ನಿತರರು ಹಾಜರಿದ್ದರು.
ಭಾನುವಾರ ಬೆಳಗ್ಗೆ ಮೂರುಸಾವಿರ ಮಠದಿಂದ ಮೆರವಣಿಗೆಯಲ್ಲಿ ಕರೆತಂದು ಭಗವಾಧ್ವಜ ಹಿಡಿದ ಗಣೇಶ ಮೂರ್ತಿಯನ್ನು ಮಧ್ಯಾಹ್ನ ಸುಮಾರು 12 ಗಂಟೆಗೆ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ರಾಣಿ ಚನ್ನಮ್ಮ ಮೈದಾನದಲ್ಲಿ ಸತತ 5 ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಮೂರು ದಿನಗಳವರೆಗೆ ಮೈದಾನದಲ್ಲಿ ಗಣೇಶೋತ್ಸವ ನಡೆಯಲಿದೆ.
ಸೆ. 16ರಂದು ಮೂರ್ತಿಯ ವಿಸರ್ಜನೆ ನಡೆಯಲಿದೆ. ಬೆಳಗ್ಗೆ 11.55ಕ್ಕೆ ಗಣೇಶ ಮೂರ್ತಿಯನ್ನು ರಾಣಿ ಚನ್ನಮ್ಮ ಮೈದಾನದಿಂದ ಹೊರತಂದು, ಮೆರವಣಿಗೆ ಮೂಲಕ ಹೊಸೂರು ಬಾವಿಯಲ್ಲಿ ವಿಸರ್ಜಿಸಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net