ಸಂಘದ ಅಭಿವೃದ್ಧಿಯಲ್ಲಿ ಸದಸ್ಯರ ಸಹಭಾಗಿತ್ವ ಮುಖ್ಯ

ನವನಗರ ಕುರುಹಿನಶೆಟ್ಟಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ರವೀಂದ್ರ ಹರ್ತಿ ಅನಿಸಿಕೆ
ಹುಬ್ಬಳ್ಳಿಯ ನವನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕುರುಹಿನಶೆಟ್ಟಿ ಸಮಾಜ ಅಭಿವೃದ್ಧಿ ಸಂಘದ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ರವೀಂದ್ರ ಹರ್ತಿ, ಮಹಾಂತೇಶ ಕೋಳಿವಾಡ, ಶಿವಾನಂದ ಜಾಡರ, ಕೆ.ಎಸ್​. ಡೊಳ್ಳಿನ, ಮಾಗುಂಡಪ್ಪ ಸಿರಿ, ವಿ.ಬಿ. ಚವಡಿ ಇತರರು ಇದ್ದರು.
ಹುಬ್ಬಳ್ಳಿಯ ನವನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕುರುಹಿನಶೆಟ್ಟಿ ಸಮಾಜ ಅಭಿವೃದ್ಧಿ ಸಂಘದ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ರವೀಂದ್ರ ಹರ್ತಿ, ಮಹಾಂತೇಶ ಕೋಳಿವಾಡ, ಶಿವಾನಂದ ಜಾಡರ, ಕೆ.ಎಸ್​. ಡೊಳ್ಳಿನ, ಮಾಗುಂಡಪ್ಪ ಸಿರಿ, ವಿ.ಬಿ. ಚವಡಿ ಇತರರು ಇದ್ದರು.
Published on: 

ಹುಬ್ಬಳ್ಳಿ: ಆರಂಭಗೊಂಡು ನಾಲ್ಕು ವರ್ಷದಲ್ಲಿ ನವನಗರದ ಕುರುಹಿನಶೆಟ್ಟಿ (ನೇಕಾರ) ಸಮಾಜ ಅಭಿವೃದ್ಧಿ ಸಂಘವು ಬಹಳಷ್ಟು ಪ್ರಗತಿ ಸಾಧಿಸಿ ಮಾದರಿಯಾಗಿದೆ ಎಂದು ಧಾರವಾಡ ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ರವೀಂದ್ರ ಹರ್ತಿ ಶ್ಲಾಘಿಸಿದರು.

ನವನಗರದಲ್ಲಿ ಭಾನುವಾರ ಏರ್ಪಾಟಾಗಿದ್ದ ಕುರುಹಿನಶೆಟ್ಟಿ (ನೇಕಾರ) ಸಮಾಜ ಅಭಿವೃದ್ಧಿ ಸಂಘದ 4ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿಯಲ್ಲಿ ಸದಸ್ಯರ ಸಹಭಾಗಿತ್ವ ಬಹು ಮುಖ್ಯ. ಸಂಘದ ಸದಸ್ಯರು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ವಾರ್ಷಿಕೋತ್ಸವ ಆಚರಣೆ ಮಾಡಿದ್ದಾರೆ. ಸದಸ್ಯರು ದೇಣಿಗೆಯಿಂದಲೇ ಕಾರ್ಯಕ್ರಮ ನಡೆಸುವ ಮೂಲಕ ಸಂದ ಹಣ ಉಳಿತಾಯಕ್ಕೂ ಸಾಕ್ಷಿಯಾಗಿದ್ದಾರೆ. ಕುರುಹಿನಶೆಟ್ಟಿ ಸಮಾಜದ ಮಕ್ಕಳಿಗೆ ಕೆಲವೆಡೆ ಉಂಟಾಗಿದ್ದ ಜಾತಿ ಪ್ರಮಾಣಪತ್ರ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಮುಂದೆಯೂ ಒಗ್ಗಟ್ಟು ಹೆಚ್ಚಲಿ ಎಂದು ಸಲಹೆ ನೀಡಿದರು.

ಸಂಘದ ಗೌರವ ಅಧ್ಯಕ್ಷ ಮಹಾಂತೇಶ ಕೋಳಿವಾಡ, ನಿವೃತ್ತ ಅಬಕಾರಿ ಅಧಿಕಾರಿ ಶಿವಾನಂದ ಜಾಡರ, ಮಹಿಳಾ ಸಂಘದ ಉಪಾಧ್ಯಕ್ಷೆ ಲಲಿತಾ ಡೊಳ್ಳಿನ ಮಾತನಾಡಿ, ಸಮಾಜಕ್ಕೆ ಒಂದು ನಿವೇಶನ ಪಡೆದು, ದೇವಸ್ಥಾನ ಅಥವಾ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಆಗ್ರಹಿಸಿದರು.

ನಿವೃತ್ತ ಅಬಕಾರಿ ಅಧಿಕಾರಿ ಮಲ್ಲೇಶಪ್ಪ ಇಟಗಳ್ಳಿ, ಫಾರ್ಮಾ ಇಂಡಸ್ಟ್ರಿಸ್​ನ ಬಸವರಾಜ ಚವಡಿ, ಪರಪ್ಪ ಅಳಗಿ, ಉಪಾಧ್ಯಕ್ಷ ಕೆ.ಎಸ್​. ಡೊಳ್ಳಿನ, ಮಾಗುಂಡಪ್ಪ ಸಿರಿ, ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿ.ಬಿ. ಚವಡಿ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಎನ್​.ಆರ್​. ಗುಡ್ಡಾನವರ ವಾರ್ಷಿಕ ವರದಿ ವಾಚಿಸಿದರು. ಈಶ್ವರಪ್ಪ ಮೂಲಿಮನಿ ಅವರು ಕಳೆದ ಸಾಲಿನ ಸಭೆಯ ನಿರ್ಣಯಗಳನ್ನು ಓದಿ ದೃಢೀಕರಿಸಿದರು. ಖಜಾಂಚಿ ಎಸ್​.ಬಿ. ದಿಬ್ಬದಮನಿ ಅವರು ಅಢಾವೆ ಪತ್ರಿಕೆ ಮಂಡಿಸಿದರು. ಬಿ.ಎಸ್​.ಬಾವೂರ ಸ್ವಾಗತಿಸಿದರು. ಗೀತಾ ಓಂಕಾರಿ, ನಂದಿನಿ ಕೋಳಿವಾಡ ನಿರೂಪಿಸಿದರು. ನಾಗೇಂದ್ರ ಮನಗೂಳಿ ವಂದಿಸಿದರು.

ನಿವೃತ್ತ ನೌಕರರು, ಸಂಘದ ಹಿರಿಯ ಸದಸ್ಯರು ಹಾಗೂ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಸಂಜನಾ ಮಲ್ಲಿಕಾರ್ಜುನ ಶಿರಹಟ್ಟಿ, ಅನುರಾಗ ವಿನಾಯಕ ನಾರಾಯಣಪುರ, ವಿವೇಕ ಶರಣಪ್ಪ ಕುರ್ತಕೋಟಿ, ಪಿಯುಸಿ ವಿದ್ಯಾರ್ಥಿಗಳಾದ ರಿತೇಶ ಗಾಡಗೋಳಿ, ಈಶ್ವರಿ ಶಿವಲಿಂಗ ಕೆಸೋಲಗಿ ಮತ್ತು ಮಾನ್ಯಾ ಮುತ್ತಣ್ಣ ನಂದಿಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖಂಡರಾದ ವೀರಪ್ಪ ಮುಶಿಗೇರಿ, ಬಸವರಾಜ ದೋತ್ರದ, ಶಶಿಧರ ಓಂಕಾರಿ, ಮಂಜುನಾಥ ನೇಕಾರ, ಶಂಕರ ಜಾಡಗೌಡರ, ನಿರ್ಮಲಾ ಕಿರೇಸೂರ, ಅನುಷಾ ಡೊಳ್ಳಿನ, ದೀಪಾ ನಂದಿಹಳ್ಳಿ, ಗಿರಿಜಾ ಶಿರಕೋಳ, ಗೀತಾ ಮೂಲಿಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net