ರೇಷ್ಮೆ ಇಲಾಖೆ ವಿಶ್ರಾಂತ ನೌಕರರ ಸಭೆ

ಹಿರಿಯ ಸದಸ್ಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಹುಬ್ಬಳ್ಳಿಯ ನವನಗರದಲ್ಲಿ ಏರ್ಪಡಿಸಿದ್ದ ರೇಷ್ಮೆ ಇಲಾಖೆ ನಿವೃತ್ತ ನೌಕರರ ಸಂದ ಸಭೆಯಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು. ಟಿ. ವೆಂಕಪ್ಪ, ಎಂ.ಎಂ. ಖಾಜಿ, ಬಿ.ಎ. ಗಾಣಿಗೇರ, ಎಂ.ಎಸ್​. ಸವಣೂರ, ಎಂ.ಎನ್​. ಮಠ, ಇತರರು ಇದ್ದರು.
ಹುಬ್ಬಳ್ಳಿಯ ನವನಗರದಲ್ಲಿ ಏರ್ಪಡಿಸಿದ್ದ ರೇಷ್ಮೆ ಇಲಾಖೆ ನಿವೃತ್ತ ನೌಕರರ ಸಂದ ಸಭೆಯಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು. ಟಿ. ವೆಂಕಪ್ಪ, ಎಂ.ಎಂ. ಖಾಜಿ, ಬಿ.ಎ. ಗಾಣಿಗೇರ, ಎಂ.ಎಸ್​. ಸವಣೂರ, ಎಂ.ಎನ್​. ಮಠ, ಇತರರು ಇದ್ದರು.
Published on: 

ಹುಬ್ಬಳ್ಳಿ: ರೇಷ್ಮೆ ಇಲಾಖೆ ವಿಶ್ರಾಂತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ನವನಗರದ ಶ್ರೀ ಚಿಕೇನಕೊಪ್ಪ ಶರಣರ ಅಂಧರ ಆಶ್ರಮದಲ್ಲಿ ಜರುಗಿತು.

ರೇಷ್ಮೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಟಿ. ವೆಂಕಪ್ಪ ಹಾಗೂ ಅಪರ ರೇಷ್ಮೆ ನಿವೃತ್ತ ನಿರ್ದೇಶಕ ಎಂ.ಎಂ. ಖಾಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂದ ಅಧ್ಯಕ್ಷ ಬಿ.ಎ. ಗಾಣಿಗೇರ, ಸಂಘದ ಚಟುವಟಿಕೆ, ಸಾರ್ವಜನಿಕ ಹಾಗೂ ಜನೋಪಯೋಗಿ ಕೆಲಸಗಳ ಬಗ್ಗೆ ವಿವರಣೆ ನೀಡಿದರು.

ಕಾರ್ಯದರ್ಶಿ ಎಂ.ಎಸ್​. ಸವಣೂರ ವಾರ್ಷಿಕ ವರದಿ ಹಾಗೂ ಖಜಾಂಚಿ ಎಂ.ಎನ್​. ಮಠ ಲೆಕ್ಕಪತ್ರ ವರದಿ ವಾಚನ ಮಾಡಿದರು.

ಹಿರಿಯರಿಗೆ ಸನ್ಮಾನ: ಅಖಂಡ ಧಾರವಾಡ ಜಿಲ್ಲೆಯ 75 ವರ್ಷ ದಾಟಿದ 9 ಮಂದಿ ನಿವೃತ್ತ ನೌಕರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಸ್​.ಎಸ್​.ಎಲ್​.ಸಿ. ಪರೀಕ್ಷೆಯಲ್ಲಿ ಶೇ. 95 ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ರಿತಿಕಾ ಮಠ ಹಾಗೂ ಸೃಷ್ಟಿ ದೀಪಕ್​ ಪೂಜಾರ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಿವೃತ್ತ ನೌಕರರಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೇಷ್ಮೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಸ್​.ಎಚ್​. ಅರಹುಣಸಿ, ಸಂಘದ ಕ್ರಿಯಾಶೀಲತೆ ಮತ್ತು ಜನಪರ ಕಾಳಜಿ ಪ್ರಶಂಸಿಸಿದರು.

ಡಾ. ಉಮೇಶ ಹಳ್ಳಿಕೇರಿ, ವೃದ್ಧಾಪ್ಯದಲ್ಲಿನ ಸಮಸ್ಯೆಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ಆಶ್ರಮದ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರಿಗೆ ಸಿಹಿ ಭೋಜನ ವ್ಯವಸ್ಥೆ ಮಾಡಲಾಯಿತು. ಮಹಾರುದ್ರ ಬಡಿಗೇರ ಸ್ವಾಗತಿಸಿದರು. ಬಿ.ಡಿ. ಕುಂದರಗಿ ವಂದಿಸಿದರು. ಸಹ-ಕಾರ್ಯದರ್ಶಿ ಎಂ.ಎಂ. ಗದುಗಿನ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net