media and law ಜವಾಬ್ದಾರಿ ನಿಭಾಯಿಸುತ್ತಿವೆ ಪತ್ರಿಕೆಗಳು

media and law ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಕರ್ತ ಅರುಣಕುಮಾರ ಹಬ್ಬು ಅವರ ‘ಮಾಧ್ಯಮ ಮತ್ತು ಕಾನೂನು’ ಪುಸ್ತಕವನ್ನು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹಾಗೂ ಕೆಎಲ್‌ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಬಿಡುಗಡೆಗೊಳಿಸಿದರು.
media and law ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಕರ್ತ ಅರುಣಕುಮಾರ ಹಬ್ಬು ಅವರ ‘ಮಾಧ್ಯಮ ಮತ್ತು ಕಾನೂನು’ ಪುಸ್ತಕವನ್ನು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹಾಗೂ ಕೆಎಲ್‌ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಬಿಡುಗಡೆಗೊಳಿಸಿದರು.
Published on
ಹುಬ್ಬಳ್ಳಿ: ಸಮಾಜದ ಬೆಳವಣಿಗೆಗೆ media and law ಪೂರಕವಾಗಬಲ್ಲ ವರದಿ, ವಿಮರ್ಶಾತ್ಮಕ ಲೇಖನಗಳನ್ನು ಪತ್ರಿಕೆಗಳು ಪ್ರಕಟಿಸುತ್ತ, ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿವೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಬಣ್ಣಿಸಿದರು.
ಕೆಎಲ್ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಾಲೇಜ್, ಎಸ್.ಎಸ್. ಕೊತಂಬ್ರಿ ವಿಜ್ಞಾನ ಕಾಲೇಜ್‌ನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಕನ್ನಡ ಧ್ವನಿ ಟ್ರಸ್ಟ್ ವತಿಯಿಂದ ಇಲ್ಲಿಯ ಶ್ರೀ ಕಾಡಸಿದ್ದೇಶ್ವರ ಕಾಲೇಜ್ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಕರ್ತ ಅರುಣಕುಮಾರ ಹಬ್ಬು ಅವರ ‘ಮಾಧ್ಯಮ ಮತ್ತು ಕಾನೂನು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹೆಚ್ಚಿನ ಲೈಕ್ ಮತ್ತು ಕಮೆಂಟ್ ಪಡೆಯುವ ಉದ್ದೇಶದಿಂದ ಸಮಾಜದ ಮೇಲೆ ನಕರಾತ್ಮಕ ಹಾಗೂ ವ್ಯತಿರಿಕ್ತ ಪರಿಣಾಮ ಬೀರಬಲ್ಲ ವರದಿಗಳು ಈಗೀಗ ಹೆಚ್ಚು ಪ್ರಕಟವಾಗುತ್ತಿವೆ. ವೈಯಕ್ತಿಕ ಪ್ರಚಾರ ಪಡೆದರೂ ಅಂತಿಮವಾಗಿ ಜನರೇ ಸತ್ಯವನ್ನು ಪರಾಮರ್ಶಿಸುವರು ಎಂದರು.
ಮಾಧ್ಯಮ ಮತ್ತು ಕಾನೂನು ಪುಸ್ತಕದಲ್ಲಿ ಪತ್ರಕರ್ತರಿಗೆ ಅನುಕೂಲವಾಗಬಲ್ಲ ಸಾಕಷ್ಟು ವಿಷಯಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಸುಗಮವಾಗಿ ಸಾಗಬೇಕಾದರೆ ಪತ್ರಿಕೋದ್ಯಮಿಗಳು, ಪತ್ರಕರ್ತರು ಪಾಲಿಸಬೇಕಾದ ಕಾನೂನು ಏನು ಎಂಬುದು ಈ ಪುಸ್ತಕದಲ್ಲಿದೆ.ಪತ್ರಕರ್ತರು ದೈನಂದಿನ ವೃತ್ತಿ ಜೀವನದಲ್ಲಿ ಎದುರಿಸುವ ಕಾನೂನು ಸವಾಲುಗಳನ್ನು ಉದಾಹರಣೆ ಸಮೇತ ವಿವರಿಸಲಾಗಿದೆ. ಇದು ಪತ್ರಿಕೋದ್ಯಮದ ಶಾಸನವಾಗಿದೆ ಎಂದರು.
ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆ ಸರಿದಾರಿಯಲ್ಲಿ ಸಾಗಲು ನಾಲ್ಕೂ ಅಂಗಗಳು ಮುಖ್ಯ. ಅದರಲ್ಲೂ ಪತ್ರಿಕಾ ರಂಗದಲ್ಲಿರುವವರಿಗೆ ಮಾಧ್ಯಮ ಮತ್ತು ಕಾನೂನು ಪುಸ್ತಕದಿಂದ ಮಾರ್ಗದರ್ಶನ ಸಿಗಲಿದೆ ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಮಾತನಾಡಿ, ಅರುಣಕುಮಾರ ಹಬ್ಬು ಅವರ ಬದುಕು ಮತ್ತು ಬರಹ ಏಕತಾನತೆಯಿಂದ ಕೂಡಿದೆ. ಕಿರಿಯರಿಗೆ ಅವರ ಮಾರ್ಗದರ್ಶನ ಮತ್ತು ಸಲಹೆ ಇಂದಿಗೂ ಅಗತ್ಯವಾಗಿದೆ ಎಂದರು.
ಪತ್ರಕರ್ತ ಬಂಡು ಕುಲಕರ್ಣಿ ಮಾತನಾಡಿ, ಪತ್ರಿಕಾ ರಂಗದಲ್ಲಿದ್ದವರಿಗೆ ಕಾನೂನು ತಿಳಿವಳಿಕೆ ಅಗತ್ಯ. ಪ್ರಕಟಿತ ಸುದ್ದಿಗಳ ಬಗ್ಗೆ ತರಹೇವಾರಿ ವಿಶ್ಲೇಷಣೆಗಳು ಶುರುವಾಗುತ್ತವೆ. ಕೆಲವರು ಕೋರ್ಟ್ ಮೆಟ್ಟಿಲು ಹತ್ತಿದ ಉದಾಹರಣೆಗಳಿವೆ. ಆಗ ಇಂಥ ಪುಸ್ತಕಗಳಿಂದ ಮಾರ್ಗದರ್ಶನ ಸಿಗಲಿದೆ ಎಂದರು.
ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಪತ್ರಿಕಾ ವೃತ್ತಿಯಲ್ಲಿದ್ದರೂ ಕಾನೂನು ಚೌಕಟ್ಟು ಇರಲಿಲ್ಲ. ಅಧಿಕೃತ ಪುಸ್ತಕ ಈಗ ಹೊರಗಡೆ ಬಂದಿದೆ. ಪುಸ್ತಕದ ಮೂಲಕ ಜೆನ್‌ಜೀಗಳಿಗೆ ಲಕ್ಷ್ಮಣ ರೇಖೆ ಹಾಕಿ ಕೊಡಲಾಗಿದೆ ಎಂದು ವಿಶ್ಲೇಷಿಸಿದರು.
ಪುಸ್ತಕ ಕರ್ತೃ ಅರುಣಕುಮಾರ ಹಬ್ಬು ಮಾತನಾಡಿ, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರಿಗೆ ಈ ಪುಸ್ತಕ ದಾರಿದೀಪವಾಗಲಿದೆ ಎಂದು ಆಶಿಸಿದರು.
ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಡಾ. ವೀರೇಶ ಹಂಡಿಗಿ ಪುಸ್ತಕದ ಕಿರು ಪರಿಚಯ ಮಾಡಿದರು.
ಕನ್ನಡ ಧ್ವನಿ ಟ್ರಸ್ಟ್ ಮುಖ್ಯಸ್ಥ ಗಣಪತಿ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ರಾಹುಲ ಬೆಳಗಲಿ, ವಿಠ್ಠಲದಾಸ ಕಾಮತ್, ಷಣ್ಮುಖ ಕೋಳಿವಾಡ, ಪುಸ್ತಕದ ಬಗ್ಗೆ ಸದಾಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಚಾರ್ಯೆ ಡಾ. ಸುಮಂಗಲಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವಿದುಷಿ ರೇಖಾ ಹೆಗಡೆ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net