ಯುವಕರು ಶ್ರೇಷ್ಠ ಪರಂಪರೆ ಅಳವಡಿಸಿಕೊಳ್ಳಲಿ

ಎನ್​ಎಸ್​ಎಸ್​ ಶಿಬಿರದಲ್ಲಿ ಪ್ರೊ. ಎಸ್​.ಎ. ಗಾಣಿಗೇರ ಸಲಹೆ
ಕಲಟಗಿಯಲ್ಲಿ ಏರ್ಪಡಿಸಿದ್ದ ಎನ್​ಎಸ್​ಎಸ್​ ಸಂಸ್ಥಾಪನಾ ದಿನಾಚರಣೆಯನ್ನು ಪ್ರೊ. ಎಸ್​.ಎ. ಗಾಣಿಗೇರ, ಪ್ರೊ. ಎನ್​.ಎಂ. ಸಂಗಮನವರ, ಡಾ. ಸಂತೋಷ, ಪ್ರೊ. ಕೆ.ಎಸ್​. ಪಾಟೀಲ ಇತರರು ಇದ್ದರು.
ಕಲಟಗಿಯಲ್ಲಿ ಏರ್ಪಡಿಸಿದ್ದ ಎನ್​ಎಸ್​ಎಸ್​ ಸಂಸ್ಥಾಪನಾ ದಿನಾಚರಣೆಯನ್ನು ಪ್ರೊ. ಎಸ್​.ಎ. ಗಾಣಿಗೇರ, ಪ್ರೊ. ಎನ್​.ಎಂ. ಸಂಗಮನವರ, ಡಾ. ಸಂತೋಷ, ಪ್ರೊ. ಕೆ.ಎಸ್​. ಪಾಟೀಲ ಇತರರು ಇದ್ದರು.
Published on: 

ಹುಬ್ಬಳ್ಳಿ: ಸಮಾಜ ನನಗೇನು ಕೊಟ್ಟಿದೆ ಎಂದು ಪ್ರಶ್ನಿಸುವುದಕ್ಕಿಂತ, ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ನಾನೇನು ಕೊಡುಗೆ ನೀಡಬಲ್ಲೆ ಎಂಬ ಆತ್ಮಾವಲೋಕನ ಪ್ರತಿಯೊಬ್ಬ ಯುವಕನಲ್ಲೂ ಮೂಡಬೇಕು ಎಂದು ಕೆ.ಇ. ಬೋರ್ಡ್​ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಸ್​.ಎ. ಗಾಣಿಗೇರ ಹೇಳಿದರು.

ಕಲಘಟಗಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಎನ್​ಎಸ್​ಎಸ್​ ಸಂಸ್ಥಾಪನಾ ದಿನಾಚರಣೆಯಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ಕಾಯಕ, ಸಹೋದರತ್ವ, ರಾಷ್ಟ್ರಪ್ರೇಮ, ಸಮಾಜಸೇವೆ, ಸಂಸ್ಕಾರ ಮತ್ತು ಸದ್ವಿಚಾರಗಳನ್ನು ಯುವಜನತೆಯಲ್ಲಿ ಬೆಳೆಸಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಶ್ರೇಷ್ಠ ವೇದಿಕೆಯೇ ರಾಷ್ಟ್ರೀಯ ಸೇವಾ ಯೋಜನೆ (ಎನ್​ಎಸ್​ಎಸ್​) ಎಂದು ಅಭಿಪ್ರಾಯಪಟ್ಟರು.

ಯುವಜನತೆ ಟ್ರೆಂಡ್​ಗಳ ಹಿಂದೆ ಓಡುವ ಬದಲು ಭಾರತೀಯ ಶ್ರೇಷ್ಠ ಸಂಸ್ಕೃತಿ ಮತ್ತು ಪರಂಪರೆಯನ್ನು ಅಳವಡಿಸಿಕೊಳ್ಳಬೇಕು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯನ್ನು ಬಿಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎನ್​.ಎಂ. ಸಂಗಮನವರ ಮಾತನಾಡಿದರು.

ಐಕ್ಯೂಎಸಿ ಸಂಯೋಜಕರಾದ ಡಾ. ಸಂತೋಷ ಮನ್ನೋಪಂತರ್​, ಪ್ರೊ. ಕೆ.ಎಸ್​. ಪಾಟೀಲ್​, ಡಾ. ಸಲೇಹಾ ಬೆಳಗಾಂವ, ಕಲಘಟಗಿ ತಾಲೂಕು ಸಂಗ್ರಾಮ ಸೇನೆಯ ಅಧ್ಯಕ್ಷ ಸಾತಪ್ಪ ಕುಂಕೂರ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಭುಲಿಂಗ ರಂಗಾಪುರ, ಪೂಜಾ ಅರಳಿಮರದ, ಅನಿತಾ ಕೌಲಗೇರಿ, ಲಕ್ಷ್ಮೀ ಕೋಣಿ, ಕಾದಂಬರಿ ಗಾವಡೆನವರ ಉಪಸ್ಥಿತರಿದ್ದರು.

ಕಾಲೇಜಿನ ಬೋಧಕ -ಬೋಧಕೇತರ ಸಿಬ್ಬಂದಿ, ಸ್ವಯಂಸೇವಕರು ಇದ್ದರು. ಕಾಶವ್ವ ಶಿಂಧೆ ಹಾಗೂ ಸಂಗಡಿಗರು ಎನ್​ಎಸ್​ಎಸ್​ ಗೀತೆ ಹಾಡಿದರು. ಸವಿತಾ, ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಕೊಪ್ಪದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net