ಪ್ರತಿಯೊಬ್ಬರೂ ಸಾಮರಸ್ಯ ಬದುಕು ಸಾಗಿಸಿ live

live ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಚಂದ್ರಶೇಖರ ಹತ್ತಿ ಹಾಗೂ ಶ್ರೀನಿವಾಸ ಭೂಮ ಅವರನ್ನು ಸನ್ಮಾನಿಸಲಾಯಿತು.
live ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಚಂದ್ರಶೇಖರ ಹತ್ತಿ ಹಾಗೂ ಶ್ರೀನಿವಾಸ ಭೂಮ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜಕ್ಕೆ ಮಾದರಿಯಾಗಬೇಕು.
  • ಸಮ ಮನಸ್ಥಿತಿಯಲ್ಲಿ ಕಾರ್ಯಮಾಡುವದನ್ನು ರೂಢಿಸಿಕೊಳ್ಳಬೇಕು.
  • ಸಮಾಜ ಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕು.
ಹುಬ್ಬಳ್ಳಿ :
ವಿದ್ಯಾನಗರದ ಬನಕಾಶಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕನ್ನಡ ಕಲಾ ಕೃಷಿ ಬಳಗ ಹಾಗೂ ಬಸವ ಸೇವಾ ಸಮಿತಿಯು ಸಂಯುಕ್ತವಾಗಿ ಆಯೋಜಿಸಿದ್ದ ಚಂದ್ರಶೇಖರ ಹತ್ತಿ ಮತ್ತು ಶ್ರೀನಿವಾಸ ಭೂಮ ಅವರ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಜ್ಞಾನದ ಬಲದಿಂದ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. 
ಅಧಿಕಾರ ಇದ್ದಾಗ ಮತ್ತು ಇಲ್ಲದಾಗ ಸಮ ಮನಸ್ಥಿತಿಯಲ್ಲಿ ಕಾರ್ಯಮಾಡುವದನ್ನು ರೂಢಿಸಿಕೊಳ್ಳಬೇಕು. ನಿವೃತ್ತಿ ನಂತರ ಉತ್ತಮ ಆರೋಗ್ಯ ಹೊಂದುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು. 
ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಸೇವಾ ನಿವೃತ್ತಿ ಹೊಂದಿದ ಚಂದ್ರಶೇಖರ ಹತ್ತಿ ಮತ್ತು ಯುನಿಯನ್ ಬ್ಯಾಂಕಿನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ ಶ್ರೀನಿವಾಸ ಭೂಮ ಅವರನ್ನು ಸನ್ಮಾನಿಸಲಾಯಿತು. 
ಬಸವ ಸೇವಾ ಸಮಿತಿಯ ಅಧ್ಯಕ್ಷ ಡಾ. ಶಿವಯೋಗಪ್ಪ ಎಮ್ಮಿ ಅಧ್ಯಕ್ಷತೆ ವಹಿಸಿದ್ದರು. 
ಕನ್ನಡ ಕಲಾ ಕೃಷಿ ಬಳಗದ ಅಧ್ಯಕ್ಷ ಕೆ.ಸಿ. ಪಾಟೀಲ ಮತ್ತು ಡಾ. ಸಿದ್ದೇಶ್ವರ ಕಡಕೋಳ ಉಭಯತರರ ಜೀವನ ಮತ್ತು ಸಾಧನೆಗಳ ಕುರಿತು ವಿವರಿಸಿದರು.
ಬಡಾವಣೆಯ ಗಣ್ಯರಾದ ವಿ.ವಿ. ಕುರ್ತಕೋಟಿ, ಜಾನಪದ ಕಲಾವಿದ ಡಾ. ರಾಮು ಮೂಲಗಿ ನಿವೃತ್ತ ಶಿಕ್ಷಕಿ ಪ್ರೇಮ ಕರ್ಲಟ್ಟಿ, ಸಿದ್ಧರಾಮಗೌಡ ಮಾಲಿಪಾಟೀಲ, ಶ್ರೀಶೈಲ ತುಂಗಳದ, ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net