"ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಮಹಿಳಾ ಗ್ರಂಥ ಬಹುಮಾನ ಪ್ರದಾನ

"ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಮಹಿಳಾ ಗ್ರಂಥ ಬಹುಮಾನ ಪ್ರದಾನ
"ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಮಹಿಳಾ ಗ್ರಂಥ ಬಹುಮಾನ ಪ್ರದಾನ
Published on
ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಮಹಿಳಾ ಗ್ರಂಥ ಬಹುಮಾನ- 2024 ಪ್ರದಾನ ಮಾಡಲಾಯಿತು.
ಶಿವಮೊಗ್ಗದ ಸವಿತಾ ನಾಗಭೂಷಣ ಅವರ "ದಿನದ ಪ್ರಾರ್ಥನೆ' ಕವನ ಸಂಕಲನ, ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ "ತಂಬೂರಿ' ಕವನ ಸಂಕಲನ, ಶಿವಮೊಗ್ಗದ ಡಾ. ಕೆ.ಎಸ್​. ಪವಿತ್ರಾ ಅವರ "ಧೀತನನ!' ಕಲೆ- ಸಾಹಿತ್ಯ- ಮನಸ್ಸು ಇತರೆ ಕೃತಿಗೆ ಧಾರವಾಡ ಎಸ್​ಡಿಎಂ ಸಂಸ್ಥೆಯ ಜೀವಂಧರ ಕುಮಾರ ಮಹಿಳಾ ಗ್ರಂಥ ಬಹುಮಾನ ಪ್ರದಾನ ಮಾಡಿದರು.
ಇದೇವೇಳೆ ಬೆಂಗಳೂರಿನ ರೇಣುಕಾ ಕೋಡಗುಂಟಿ ಅವರ "ಚಿಗುರೊಡೆದ ಬೇರು' ಕಥಾ ಸಂಕಲನ ಮತ್ತು ಮೈಸೂರಿನ ಗೀತಾ ಸೀತಾರಾಮ ಅವರ "ಅಹಲ್ಯಾಬಾಯಿ ಹೋಳ್ಕರ್​' ಕಾದಂಬರಿಗೆ ಗೈರುಹಾಜರಿಯಲ್ಲಿ ಗ್ರಂಥ ಬಹುಮಾನ ಪ್ರದಾನ ಮಾಡಲಾಯಿತು. ಗ್ರಂಥ ಬಹುಮಾನ ತಲಾ 15 ಸಾವಿರ ರೂಪಾಯಿ ನಗದು ಒಳಗೊಂಡಿದೆ.
ಡಾ. ವೈ.ಎಂ. ಯಾಕೊಳ್ಳಿ ಕವನ ಸಂಕಲನಗಳ ಕುರಿತು, ಡಾ. ಶರಣಮ್ಮ ಗೋರೇಬಾಳ ಕಾದಂಬರಿ, ನಾಟಕ ಕುರಿತು ಹಾಗೂ ಡಾ. ಎಚ್​.ಬಿ. ಕೋಲಕಾರ ಕಥಾ ಸಂಕಲನ ಕುರಿತು ಮತ್ತು ಡಾ. ಶ್ರೀಧರ ಹೆಗಡೆ ಭದ್ರನ್​ ಇತರೆ ಲೇಖನಗಳ ಕುರಿತು ನಿರ್ಣಾಯಕರ ಪರ ನುಡಿಗಳನ್ನಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂದ ಗೌರವ ಉಪಾಧ್ಯ ಶ್ರೀನಿವಾಸ ವಾಡಪ್ಪಿ ಅಧ್ಯತೆ ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net