ಮಕ್ಕಳ ಸಾಹಿತಿ ಕೆ.ಎಚ್. ನಾಯಕ ಮಾತನಾಡಿ, ಗಣಿತ ಕಬ್ಬಿಣದ ಕಡಲೆಯಲ್ಲ. ಆಸಕ್ತಿಯಿಂದ ಅಧ್ಯಯನ ಮಾಡಿದರೆ ಅದು ಅತ್ಯಂತ ಸುಲಭ. ಗಣಿತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಗಣಿತವಿಲ್ಲದ ಜೀವನ ಉಹಿಸಿಕೊಳ್ಳುವುದೇ ಕಷ್ಟ. ಸ್ನೇಹಜೀವಿ, ಸದಾ ಹಸನ್ಮುಖಿಯಾದ ಭಾವಿಕಟ್ಟಿ ನಿವೃತ್ತಿ ನಂತರವೂ ಕ್ರಿಯಾಶೀಲರಾಗಿರುವುದು ಅಭಿನಂದನೀಯ ಎಂದರು.