33 ಮಕ್ಕಳ ರಕ್ಷಣೆ, 12.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ವಶಕ್ಕೆ
ನನ್ಹೆ ಫರಿಸ್ತೆ ಕಾರ್ಯಾಚರಣೆ
ರೈಲುಗಳಿಗೆ ಆರ್ಪಿಎಫ್ ಸಿಬ್ಬಂದಿ ಬೆಂಗಾವಲು
ನನ್ಹೆ ಫರಿಸ್ತೆ ಕಾರ್ಯಾಚರಣೆ ಅಡಿ ಆರ್ಪಿಎಫ್ ಸಿಬ್ಬಂದಿ 6 ಜನ ಬಾಲಕಿಯರು ಸೇರಿದಂತೆ 33 ಮಕ್ಕಳನ್ನು ರಕ್ಷಿಸಿದ್ದು, ಮಕ್ಕಳನ್ನು ಅವರ ಕುಟುಂಬಗಳಿಗೆ ಒಪ್ಪಿಸಲಾಗಿದೆ.
ರೈಲು ಟಿಕೆಟ್ಗಳ ಕಾಳಸಂತೆ ಮಾರಾಟ ತಡೆಯುವುದಕ್ಕಾಗಿ ಕಾರ್ಯಾಚರಣೆ ನಡೆಸಿ, 12 ಪ್ರಕರಣಗಳಲ್ಲಿ 12 ಜನ ಟಿಕೆಟ್ ದಲ್ಲಾಳಿಗಳನ್ನು ಬಂಧಿಸಲಾಯಿತು.
53 ಸಾವಿರ ರೂ. ಮೌಲ್ಯದ 18 ಬಳಕೆಯಾಗದ ಟಿಕೆಟ್ಗಳನ್ನು ಹಾಗೂ 2.32 ಲಕ್ಷ ರೂ. ಮೌಲ್ಯದ 56 ಬಳಸಿದ ಟಿಕೆಟ್ಗಳನ್ನು ಆಪರೇಷನ್ ಸತರ್ಕ್ ಕಾರ್ಯುಚರಣೆ ಅಡಿ ಆರ್ಪಿಎಫ್ 8 ಮದ್ಯ ಪ್ರಕರಣಗಳನ್ನು ಪತ್ತೆಹಚ್ಚಿದ್ದು, 55,162 ರೂ. ಮೌಲ್ಯದ 154 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದೆ.
ವಶಪಡಿಸಿಕೊಂಡ ಮದ್ಯವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಆಪರೇಷನ್ ನಾರ್ಕೆ ಅಡಿ 8 ಪ್ರಕರಣಗಳನ್ನು ಪತ್ತೆ ಹಚ್ಚಿ, 12.5 ಕೋಟಿ ರೂ. ಮೌಲ್ಯದ 127.5 ಕೆಜಿ. ಗಾಂಜಾ ವಶಪಡಿಸಿಕೊಳ್ಳಲಾಯಿತು.
ಇದರಲ್ಲಿ 14.98 ಕೆ.ಜಿ. ಆಂಫೆಟಮೈನ್, 11.98 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡ ಒಂದು ಪ್ರಕರಣವೂ ಸೇರಿದೆ. ಈ ಪ್ರಕರಣದಲ್ಲಿ ಮೂವರು ಸೇರಿ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ.
20 ಕೆ.ಜಿ. ತೂಕದ 28,460 ರೂ. ಮೌಲ್ಯದ ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಒಂದು ಪ್ರಕರಣ ಪತ್ತೆ ಹಚ್ಚಲಾಗಿದೆ.
ಪ್ರಯಾಣಿಕರು ಬಿಟ್ಟು ಹೋಗಿರುವ ಲ್ಯಾಪ್ಟಾಪ್ಗಳು, ಮೊಬೈಲ್ ಫೋನ್ಗಳು, ಆಭರಣಗಳು ಸೇರಿದಂತೆ 66.41 ಲಕ್ಷ ರೂ. ಮೌಲ್ಯದ ಇತರ ವೈಯಕ್ತಿಕ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.
ನೈಋತ್ಯ ರೈಲ್ವೆ ವಲಯದಾದ್ಯಂತ ನಿತ್ಯ 36-40 ಎಕ್ಸ್ಪ್ರೆಸ್ ಮತ್ತು ವಿಶೇಷ ರೈಲುಗಳಿಗೆ ಸುಮಾರು 130 ಆರ್ಪಿಎಫ್ ಸಿಬ್ಬಂದಿ ಬೆಂಗಾವಲು ನೀಡುತ್ತಿದ್ದಾರೆ.
ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್ ಅವರು ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.