ಹುಬ್ಬಳ್ಳಿಯಲ್ಲಿ ಸಾಮೂಹಿಕ ಸೂರ್ಯನಮಸ್ಕಾರ Surya Namaskar

Surya Namaskar ರಥಸಪ್ತಮಿ ಅಂಗವಾಗಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಯಮಿ ಶ್ರೀರಾಮ ನಾಯ್ಕ ಉದ್ಘಾಟಿಸಿದರು.
Surya Namaskar ರಥಸಪ್ತಮಿ ಅಂಗವಾಗಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಯಮಿ ಶ್ರೀರಾಮ ನಾಯ್ಕ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
  • ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
  • ಸೂರ್ಯನ ದಿವ್ಯ ಕಿರಣಗಳಿಂದ ಅನೇಕ ರೋಗಗಳು ದೂರವಾಗಿವೆ.
ನೂರಾರು ಜನ ಯೋಗಾಸಕ್ತ ಪುರುಷ, ಮಹಿಳೆಯರು ಅಂದಾಜು ಒಂದೂವರೆ ತಾಸು ಸೂರ್ಯದೇವನ ಮಂತ್ರ ಸಹಿತ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು. ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
ವಕ್ತಾರರಾಗಿ ಪಾಲ್ಗೊಂಡಿದ್ದ ವ್ಯಾಪಾರಸ್ಥ ಸತೀಶಕುಮಾರ ಪಿ.ಡಿ., ಸೂರ್ಯನ ದಿವ್ಯ ಕಿರಣಗಳಿಂದ ಅನೇಕ ರೋಗಗಳು ದೂರವಾಗಿವೆ. ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಮನಸ್ಸು ಹಾಗೂ ದೇಹಕ್ಕೆ ನವಚೈತನ್ಯ ದೊರಕುತ್ತದೆ ಎಂದರು.
ಯೋಗಿಗಳು ಸಹ ಸೈನಿಕರಂತೆ ದೇಶಸೇವೆ ಮಾಡುವವರು. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನ ನಡೆಸಬಹುದು. ಯೋಗ ಶಿಕ್ಷಕರು ಜನರಿಗೆ ಯೋಗ ಕಲಿಸುವ ಮೂಲಕ ಅವರನ್ನು ಆರೋಗ್ಯವಂತರನ್ನಾಗಿ ಮಾಡಬಹುದು ಎಂದರು.
ಅತಿಥಿಯಾಗಿದ್ದ ಉದ್ಯಮಿ ಶ್ರೀರಾಮ ನಾಯ್ಕ ಮಾತನಾಡಿ, ಯುವಕರು ಯೋಗಾಭ್ಯಾಸದ ಕಡೆ ಗಮನ ಹರಿಸಬೇಕು. ಯೋಗದ ಮೂಲಕ ನಿರೋಗಿಗಳಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಯೋಗ ಶಿಕ್ಷಕಿ ಅನಿತಾ ಪವಾರ, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.
ಯೋಗಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹುಬ್ಬಳ್ಳಿ ಶಾಖೆಯ ಜಿಲ್ಲಾ ಸಂಚಾಲಕರಾದ ಗೋಪಾಕೃಷ್ಣ ಜೋಶಿ, ಮಹಾದೇವ ಹೊಳೆಣ್ಣವರ, ಅಮರಾವತಿ ಗಾಣಿಗಿ ಹಾಗೂ ಇತರರಿದ್ದರು.
ವೆಂಕಟೇಶ ಕಾಟವೆ ಸ್ವಾಗತಿಸಿದರು. ಕಾವೇರಿ ಕಾಂಬಳೆ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net