ರೋಟರಿ ಕ್ಲಬ್​ ಸಹಯೋಗದಲ್ಲಿ ಸಾಮೂಹಿಕ ವಿವಾಹ

ಜಿಲ್ಲಾಧಿಕಾರಿ ಸ್ನೇಹಲ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ
ಹುಬ್ಬಳ್ಳಿಯ ಶಿರಡಿನಗರದಲ್ಲಿ ರೋಟರಿ ಕ್ಲಬ್​ ಸಹಯೋಗದಲ್ಲಿ ಮೂರು ಜೋಡಿ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಸ್ನೇಹಲ್​, ಜಿತೇಂದ್ರ ಪಾಂಜಾಲ, ಮಂಜುನಾಥ ಹೊಂಬಳ, ಮೈತ್ರಾ ರಡ್ಡೇರ ಇತರರು ಇದ್ದರು.
ಹುಬ್ಬಳ್ಳಿಯ ಶಿರಡಿನಗರದಲ್ಲಿ ರೋಟರಿ ಕ್ಲಬ್​ ಸಹಯೋಗದಲ್ಲಿ ಮೂರು ಜೋಡಿ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಸ್ನೇಹಲ್​, ಜಿತೇಂದ್ರ ಪಾಂಜಾಲ, ಮಂಜುನಾಥ ಹೊಂಬಳ, ಮೈತ್ರಾ ರಡ್ಡೇರ ಇತರರು ಇದ್ದರು.
Published on

ಹುಬ್ಬಳ್ಳಿ: ರೋಟರಿ ಕ್ಲಬ್​ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಶಿರಡಿನಗರದಲ್ಲಿರುವ ಶ್ರೀ ಶಿರಡಿ ಸಾಯಿ ಕಲ್ಯಾಣ ಮಂಟಪದಲ್ಲಿ ಮೂರು ಬಡ ಕುಟುಂಬದ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು.

ಹುಬ್ಬಳ್ಳಿಯ ರೋಟರಿ ಕ್ಲಬ್​ ಪ್ರತಿ ವರ್ಷ ಆರ್ಥಿಕವಾಗಿ ಹಿಂದುಳಿದ ಜೋಡಿಗಳ ವಿವಾಹಕ್ಕೆ ನೆರವಾಗುತ್ತಿದೆ. ಅದರಂತೆ ಇಂದು ಸಾಂಪ್ರದಾಯಿಕ ಹಿಂದೂ ವಿವಾಹ ವಿಧಿವಿಧಾನಗಳು ಮತ್ತು ಆಚರಣೆಗಳೊಂದಿಗೆ ಮೂರು ಜೋಡಿಗೆ ಮದುವೆ ಮಾಡಲಾಯಿತು.

ವಿಶೇಷ ಎಂದರೆ ಜಿಲ್ಲಾಧಿಕಾರಿ ಸ್ನೇಹಲ್​ ಅವರು ಉಪಸ್ಥಿತರಿದ್ದು, ನವ ದಂಪತಿಗಳಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು. ಸಿದ್ರಾಮಪ್ಪ ಮತ್ತು ನೇತ್ರಾ, ದೇವರಾಜ ಮತ್ತು ಐಶು, ಪ್ರಶಾಂತ ಮತ್ತು ಆಯೇಷಾ ಅವರು ವಿವಾಹ ಬಂಧನಕ್ಕೆ ಒಳಗಾದರು.

ರೋಟರಿ ಕ್ಲಬ್​ ಮಾಜಿ ಅಧ್ಯಕ್ಷ ಜಿತೇಂದ್ರ ಪಾಂಚಾಲ್​ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸೇವಾ ವಿಭಾಗದ ನಿರ್ದೇಶಕ ಮಂಜುನಾಥ ಹೊಂಬಳ ಮೇಲ್ವಿಚಾರಣೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀಕ್ಷಕಿ ಮೈತ್ರಾ ರಡ್ಡೇರ, ಉಪ ನಿರ್ದೇಶಕ ವೀರನಗೌಡ ಪಾಟೀಲ್​, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಲ್ಲಪ್ಪ ಬಡಿಗೇರ ಮತ್ತು ವಿಜಯಲ್ಮ ಪಾಟೀಲ್​ ಪಾಲ್ಗೊಂಡಿದ್ದರು.

ರೋಟರಿ ಕ್ಲಬ್​ನ ವಸಂತ ಭಸ್ಮೆ, ಮೋಹಿತ ದಂಡ್​, ಅಮರ ಸೂಜಿ, ಪ್ರೇಮಚಂದ್ರನ, ಮನೀಶ ಜೈನ್​, ಅಯ ಮೆಹರವಾಡೆ, ಪ್ರಶಾಂತ ಹೆಬಸೂರ, ಅರವಿಂದ ಕುಬಸದ, ಸುರೇಂದ್ರ ಪೋರವಾಲ್​, ಡಾ. ಮುದರಡ್ಡಿ, ಎ.ವಿ. ಸಂಕನೂರ, ಸಹನಾ ಪೈಕೋಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net