ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ

ಕುಂದಗೋಳ ತಾಲೂಕು ಮುಸ್ಲಿಂ ಶಾದಿ ಕಮಿಟಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಚಿವ ಸತೀಶ ಜಾರಕಿಹೊಳಿ ಹಾಗೂ ಗಣ್ಯರು ಉದ್ಘಾಟಿಸಿದರು. ಸಲಿಂ ಅಹ್ಮದ, ಶಾಸಕ ಎಚ್. ಕೋನರಡ್ಡಿ, ಪರಿಷತ್ ಸದಸ್ಯ ಎಚ್.ಎಚ್. ಜಕ್ಕಪ್ಪನವರ ಇತರರಿದ್ದರು.
ಕುಂದಗೋಳ ತಾಲೂಕು ಮುಸ್ಲಿಂ ಶಾದಿ ಕಮಿಟಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಚಿವ ಸತೀಶ ಜಾರಕಿಹೊಳಿ ಹಾಗೂ ಗಣ್ಯರು ಉದ್ಘಾಟಿಸಿದರು. ಸಲಿಂ ಅಹ್ಮದ, ಶಾಸಕ ಎಚ್. ಕೋನರಡ್ಡಿ, ಪರಿಷತ್ ಸದಸ್ಯ ಎಚ್.ಎಚ್. ಜಕ್ಕಪ್ಪನವರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕುಂದಗೋಳ
ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಅವಶ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ನೇತೃತ್ವದಲ್ಲಿ ಶನಿವಾರ ಆಯೋಜಿಸಲಾಗಿದ್ದ 101 ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಲ್ಲಿ ಅವರು ಮಾತನಾಡಿ, ಶಿವಳ್ಳಿ ಕುಟುಂಬಕ್ಕೆ ಉತ್ತಮ ಭವಿಷ್ಯವಿದೆ. ಸಮಯ ಬಂದಾಗ ಅದಕ್ಕೊಂದು ವೇದಿಕೆ ರೂಪಿಸೋಣ. ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಮುಸ್ಲಿಂ ಧರ್ಮದಲ್ಲಿ ಸಾಮೂಹಿಕ ವಿವಾಹ ಬಹಳಷ್ಟು ವಿರಳ. ಇಂತಹ ಐತಿಹಾಸಿಕ ಕಾರ್ಯಕ್ರಮ ಹೆಚ್ಚಾಗಿ ನಡೆಯಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬಡವರಿಗೆ ಮದುವೆ ಹೊರೆಯಾಗಬಾರದು ಎಂಬುದೆ ಸಾಮೂಹಿಕ ವಿವಾಹದ ಉದ್ದೇಶ. ಈ ಮಾಡುತ್ತಿರುವ ಮಾಜಿ ಸಚಿವ ದಿ. ಶಿವಳ್ಳಿ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಪಂಚಗ್ರಹ ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ ಮಾತನಾಡಿ, ಕಾರ್ಯಕ್ರಮ ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ದಿವಂಗತ ಸಿ.ಎಸ್. ಶಿವಳ್ಳಿ ಅವರ ಹಾದಿಯಲ್ಲಿ ಸಾಗುತ್ತಿರುವ ಷಣ್ಮುಖ ಶಿವಳ್ಳಿ ಮುಂದಿನ ಚುನಾವಣೆಯಲ್ಲಿ ಶಾಸಕರಾಗಬೇಕು ಎಂದು ಆಶಿಸಿದರು.
ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ನಮ್ಮ ಮನೆಯವರು ಬಡವರ ಹಸಿವು ನಿಗಿಸುವ ದೃಷ್ಟಿಯಿಂದ ಇಂತಹ ಕಾರ್ಯ ಮಾಡುತ್ತಿದ್ದರು. ಅವರ ಹಾದಿಯಲ್ಲಿ ಷಣ್ಮುಖ ಶಿವಳ್ಳಿ ನಡೆಯುತ್ತಿರುವುದು ಅಭಿಮಾನ ಸಂಗತಿ ಎಂದರು.
ವಿಧಾನ ಪರಿಷತ್‌ನ ಮುಖ್ಯಸಚೇತಕ ಸಲೀಂ ಅಹಮದ್, ಷಣ್ಮುಖ ಶಿವಳ್ಳಿ ಮಾತನಾಡಿದರು.
ಉದ್ಘಾಟನೆಗೂ ಮುನ್ನ ಮುಸ್ಲಿಂ ಧರ್ಮಗುರು ಹಜರತ್ ಸೈಯದ್ ತಾಜುದ್ದೀನ್ ಬಾದ್ರಿ ಉರ್ಫ ರಾಜಾ ಪೀರಾಂ ಅವರು ನವದಂಪತಿಗಳಿಗೆ ನಿಖಾ ಓದಿಸಿ ಆಶೀರ್ವಾದ ನೀಡಿದರು.
ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರು, ಶಿವಾನಂದ ಮಠದ ಶ್ರೀಗಳು, ಹಜರತ್ ಸೈಯ್ಯದ್ ತಾಜುದ್ದೀನ್ ಖಾದ್ರಿ ಸಾನ್ನಿಧ್ಯ ವಹಿಸಿದ್ದರು.
ಪರಿಷತ್ ಮುಖ್ಯಸಚೇತಕ ಸಲಿಂ ಅಹ್ಮದ, ಶಾಸಕ ಎಚ್. ಕೋನರಡ್ಡಿ, ಪರಿಷತ್ ಸದಸ್ಯ ಎಚ್.ಎಚ್. ಜಕ್ಕಪ್ಪನವರ, ಹಿರಿಯ ಮುಖಂಡ ಚಂದ್ರಶೇಖರ ಜುಟ್ಟಲ್, ಸಹಕಾರಿ ಧುರೀಣ ಅರವಿಂದ ಕಟಗಿ, ಗೌಡಪ್ಪಗೌಡ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಅನಿಲಕುಮಾರ ಪಾಟೀಲ್, ಅಲ್ತಾಪ್ ಹಳ್ಳೂರ, ಸಲೀಂ ಕ್ಯಾಲಕೊಂಡ, ವೆಂಕನಗೌಡ ಪೊಲೀಸ್ ಪಾಟೀಲ್, ಸಕ್ತು ಲಮಾಣಿ ಗಂಗಾಧರ ಪಾನಿಗಟ್ಟಿ, ಎ.ಎಂ. ಇಂಡಸಗೇರಿ, ಗೌತಮ ಭಾಪನಾ, ಸಕ್ರು ಲಮಾಣಿ, ಸಲೀಂ ಕ್ಯಾಲಕೊಂಡ, ಈರಪ್ಪ ರಾಟಿ, ಸಲೀಂ ಕಡ್ಲಿ, ಗುರು ಚಲವಾದಿ, ಬಾಬಾಜಾನ ಮುಲ್ಲಾ, ಶೌಕತಅಲಿ ಮುಲ್ಲಾ, ಮುಕ್ತುಮಸಾಬ ಹುಲಗೂರ, ಮಾಬೂಬಸಾಬ ಸುಂಕದ, ಮಹಮ್ಮದ್ ಶರೀಫ್ ಬೂಬಜಿ, ಅಕ್ಬರಬಾಷಾ ಗುಡವಾಲ, ಮಕ್ತುಮಸಾಬ ಎಲಿಗಾರ, ಫಿರೋಜಅಹ್ಮದ ಕುರಟ್ಟಿ, ಪಾಷಾಖಾದರಿ ದರ್ಗಾಬಿ, ಶರೀಫಸಾಬ ನದಾಫ, ಸಲೀಮಸಾಬ ಸಂಶಿ ಸೇರಿದಂತೆ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net