ಅಂಕಗಳಷ್ಟೇ ಯಶಸ್ಸಿನ ಮಾನದಂಡವಲ್ಲ marks

marks ಹುಬ್ಬಳ್ಳಿಯ ಕೆಎಲ್​ಇ ಬಿಸಿಎ ಪಿಸಿ ಜಾಬಿನ ಕಾಲೇಜಿನಲ್ಲಿ ಆಯೋಜಿಸಿದ್ದ ಉಗಮ-2026 ಕಾರ್ಯಕ್ರಮವನ್ನು ವಿವೇಕ ಹೊಂಗುಂಟೆಕರ ಉದ್ಘಾಟಿಸಿದರು.
marks ಹುಬ್ಬಳ್ಳಿಯ ಕೆಎಲ್​ಇ ಬಿಸಿಎ ಪಿಸಿ ಜಾಬಿನ ಕಾಲೇಜಿನಲ್ಲಿ ಆಯೋಜಿಸಿದ್ದ ಉಗಮ-2026 ಕಾರ್ಯಕ್ರಮವನ್ನು ವಿವೇಕ ಹೊಂಗುಂಟೆಕರ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸವಾಲುಗಳಿಗೆ ಹೆದರದೇ, ಆತ್ಮವಿಶ್ವಾಸದಿಂದ ಎದುರಿಸಬೇಕು.
  • ನಿತ್ಯ ಹೊಸತನ್ನು ಕಲಿಯುವ ಮನೋಭಾವ ರೂಢಿಸಿಕೊಳ್ಳಬೇಕು.
  • ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ.
ಹುಬ್ಬಳ್ಳಿ :
ಇಲ್ಲಿನ ಕೆಎಲ್​ಇ ಸಂಸ್ಥೆಯ ಬಿಸಿಎ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭ ಉಗಮ-2026 ಅನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ನಿತ್ಯ ಹೊಸತನ್ನು ಕಲಿಯುವ ಮನೋಭಾವ ರೂಢಿಸಿಕೊಳ್ಳಬೇಕು. ಸವಾಲುಗಳಿಗೆ ಹೆದರದೇ, ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಸಲಹೆ ನೀಡಿದರು.
ತಂತ್ರಜ್ಞಾನದ ಯುಗ ಕೃತಕ ಬುದ್ದಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ, ಡೇಟಾ ಸೈನ್ಸ್, ರೋಬೋಟಿಕ್ಸ್ ಹಾಗೂ ಇಂಟರ್ನೆಟ್ ಥಿಂಗ್ಸ್ ಇನ್ನಿತರ ತಾಂತ್ರಿಕ ಜ್ಞಾನವು ಭವಿಷ್ಯವನ್ನು ರೂಪಿಸುತ್ತಿವೆ.
ಆದ್ದರಿಂದ ವಿದ್ಯಾರ್ಥಿಗಳು ಹೊಸ ತಾಂತ್ರಿಕ ಜ್ಞಾನಗಳನ್ನು ಕಲಿಯುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಸಿದ್ದಲಿಂಗಪ್ಪ ಕಡಕೋಳ, ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ನಿರಂತರ ಪ್ರಯತ್ನ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವವೇ ಯಶಸ್ಸಿಗೆ ನಿಜವಾದ ಮಾರ್ಗವಾಗಿದೆ ಎಂದು ಹೇಳಿದರು.
ವಿವಿಧ ಅಂತರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆಯಾದ 174 ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು ಸನ್ಮಾನಿಸಲಾಯಿತು.
ಪ್ರೊ. ಭವಾನಿ ಜಿ. ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೊ. ರವಿ ವಾಲೀಕಾರ, ಪ್ರೊ. ಸೋನಿಯಾ ಜಿ. ಪ್ರೊ. ರುತುಜಾ ಚಿಪ್ಪರೆ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net