marathon ರನ್ ಫಾರ್ ಹೆಲ್ದಿ ನವಲಗುಂದ ಮ್ಯಾರಥಾನ್ ರೂಟ್ ಮ್ಯಾಪ್.
Published on:
Copied
Follow Us
ನವಲಗುಂದ:marathon ತಾಲೂಕಿನ ಖನ್ನೂರು ಆರ್ವಿಎಸ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ನವಲಗುಂದದಲ್ಲಿ ಇದೇ ಮೊದಲ ಬಾರಿ "ರನ್ ಫಾರ್ ಹೆಲ್ದಿ ನವಲಗುಂದ' ಮ್ಯಾರಥಾನ್ ಓಟವನ್ನು ಸೆ. 6ರಂದು ಬೆಳಗ್ಗೆ 7ಕ್ಕೆ ಆಯೋಜಿಸಲಾಗಿದೆ.
ಆರ್ವಿಎಸ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಪ್ರೊ. ಎಸ್.ಕೆ. ಜಂಗ್ಲೆಪ್ಪಗೌಡರ, ಸಂಸ್ಥಾಪಕ ಚೇರ್ಮನ್ ಸುರೇಶ ಅಂಗಡಿ ಅವರ ನೇತೃತ್ವದಲ್ಲಿ ನಡೆಯುವ ಮ್ಯಾರಥಾನ್ಗೆ ನವಲಗುಂದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಚಾಲನೆ ನೀಡುವರು.
ಮ್ಯಾರಥಾನ್ ಬಸವೇಶ್ವರ ಸರ್ಕಲ್, ಅಣ್ಣಿಗೇರಿ ರಸ್ತೆ, ಬಸ್ ನಿಲ್ದಾಣ, ಶಂಕರ ಕಾಲೇಜ ಕ್ರಾಸ್, ಗಣಪತಿ ಗುಡಿ, ನವಲಗುಂದ ಮಾರ್ಕೆಟ್, ಲಿಂಗರಾಜ ವೃತ್ತ, ನೀರಾವರಿ ಕ್ರಾಸ್, ಸರ್ಕಾರಿ ಪದವಿ ಕಾಲೇಜು, ಮಿನಿವಿಧಾನ ಸೌಧ ಮಾರ್ಗವಾಗಿ ಸಾಗಿ ವಾಪಸ್ ಮಾಡೆಲ್ ಹೈಸ್ಕೂಲ್ ತಲುಪಲಿದೆ.
ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಕೆ.ಎನ್. ಗಡ್ಡಿ, ಜಿಲ್ಲಾಧಿಕಾರಿ ಆರ್. ಸ್ನೇಹಲ್, ಎಸ್ಪಿ ಗುಂಜನ್ ಆರ್ಯ, ಇತರರು ಪಾಲ್ಗೊಳ್ಳುವರು. ಆರೋಗ್ಯವಂತ ಯುವಜನತೆ, ಮಾದಕ ವಸ್ತು ಮುಕ್ತ ಸಮಾಜ, ಜಲಮೂಲ, ಹಸಿರು ಪರಿಸರ ಸಂರಕ್ಷಣೆಯ ಸಂದೇಶ ಸಾರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 3 ಕಿ.ಮೀ., 14 ವರ್ಷ ಮೇಲ್ಪಟ್ಟವರಿಗೆ 7 ಕಿ.ಮೀ. ಓಟ ಆಯೋಜಿಸಲಾಗಿದೆ. ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಓಟ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ಹಾಗೂ ಪದಕ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.